ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿದ್ದು, ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ – ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು. ಇದರಿಂದ ಇಲ್ಲಿನ ಜನರು ಓಡಾಡಲು ಆಗದೆ ನರಕಯಾತನೆ ಅನುಭವಿಸುವಂತಾಗಿತ್ತು. ಈ ಕೆಸರುಮಯವಾದ ರಸ್ತೆಯನ್ನು ಇಂದು ಇಲ್ಲಿನ ಜನರೆ ಸ್ವತಃ ಎರಡು ಲೋಡು ಕೆಂಪು ಕಲ್ಲುಗಳನ್ನು ತರಿಸಿ ರಸ್ತೆಗೆ ಅಚ್ಚುಕಟ್ಟಾಗಿ ಹಾಸಿಬಿಟ್ಟಿದ್ದಾರೆ. ಈ ರಸ್ತೆಯು ನೂರಾರು ಮನೆಗಳಿಗೆ ಸಂಪರ್ಕದ ಕೊಂಡಿಯಾಗಿರುವುದರಿಂದ ಅಷ್ಟೆ ವಾಹನಗಳು ಕೂಡ ಈ ರಸ್ತೆಯಲ್ಲಿ ಓಡಾಡುತ್ತವೆ. ಇನ್ನೂ ಡಾಮರೀಕರಣ ಆಗದೆ ಉಳಿದಿರುವ ಈ ರಸ್ತೆಯನ್ನು ಜನರೆ ಸರಿಪಡಿಸಿರುವುದು ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಶ್ರೀನಿವಾಸ ಭಟ್ ಜೋಗಿಬೆಟ್ಟು, ಮಾದಪ್ಪ ನಾಯ್ಕ ಮಾಳಪ್ಪಮಕ್ಕಿ , ವೆಂಕಪ್ಪ ನಾಯ್ಕ ಮಾಳಪ್ಪಮಕ್ಕಿ , ಮಹೇಶ್ ಜೋಗಿಬೆಟ್ಟು, ಭಾಸ್ಕರ ಜೋಗಿಬೆಟ್ಟು, ಉಮೇಶ್ ಜೋಗಿಬೆಟ್ಟು, ಹರೀಶ್ ಜೋಗಿಬೆಟ್ಟು, ವಸಂತ ಹೊಸಮನೆ, ನಾರಾಯಣ ಜೋಗಿಬೆಟ್ಟು, ವಿನೋದ್ ಮಾಳಪ್ಪಮಕ್ಕಿ, ಶ್ರೀನಿವಾಸ ಜೋಗಿಬೆಟ್ಟು, ಚೀನಾ ನಾಯ್ಕ ಹೊಸಮನೆ ಮತ್ತಿತರರು ಉಪಸ್ಥಿತಿತರಿದ್ದರು.