
ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಹಾಗೂ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನಾಥ ರೈ ಜ್ಯೋತಿ ಅವರು ಜು.18ರಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಇದೀಗ ಕೊನೆಯುಸಿರೆಳೆದಿದ್ದಾರೆ . ಇಎನ್ ಟಿ ಸ್ಪೆಷಲಿಸ್ಟ್ ಡಾ.ರವಿಶಂಕರ್ ರಲ್ಲಿ ಚಿಕಿತ್ಸೆಗೆಂದು ಬಂದಿದ್ದ ಅವರು ಅಲ್ಲಿಂದ ಹಿಂತಿರುಗಿ ಹೋಗುತ್ತಿರುವಾಗ ಹೃದಯಾಘಾತಕ್ಕೊಳಗಾದರು. ಕೂಡಲೇ ಅವರನ್ನು ಅವರ ಪುತ್ರಿ ಮತ್ತು ಅಳಿಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರ,ಪತ್ರಿ, ಸೊಸೆ, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಜು. 19 ರಂದು ಬೆಳಿಗ್ಗೆ 9.00 ಗಂಟೆಗೆ ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.