ಅಮರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಮಾಸಿಕ ಸಭೆ, ಉದ್ಯಮ ವಿಕಾಸ ಪಾಕ್ಷಿಕ ಕಾರ್ಯಕ್ರಮ ಹಾಗೂ ತರಕಾರಿ ಬೀಜ ವಿತರಣೆ ಕಾರ್ಯಕ್ರಮ, ಗುತ್ತಿಗಾರು ಗ್ರಾಮ ಪಂಚಾಯತ್, ಗುತ್ತಿಗಾರು ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ವಿಶ್ವ ಯುವ ಕೌಶಲ್ಯ ಮಾಹಿತಿ ಕಾರ್ಯಕ್ರಮ ಜು.15 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಗಿರಿಜನ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ದಿವ್ಯಾ ಸುಜನ್ ಗುಡ್ಡೆಮನೆ ಉದ್ಯಮ ವಿಕಾಸ ಪಾಕ್ಷಿಕ ಹಾಗೂ ವಿಶ್ವ ಯುವ ಕೌಶಲ್ಯದ ಬಗ್ಗೆ ಹಾಗೂ ಸ್ವ ಉದ್ಯಮ ನಡೆಸಲು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಅವರು ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಸಂಘದ ಸದಸ್ಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.
ಸಂಜೀವಿನಿ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಸಂಘದ ಮಾಹಿತಿ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಕೃಷಿ ಸಖಿ, ಪಶು ಸಖಿ, ಗ್ರಾಮ ಪಂಚಾಯತ್ ಸದಸ್ಯೆ ಲತಾ ಆಜಡ್ಕ(FLCRP), ಸದಸ್ಯ ಜಗದೀಶ್ ಬಾಕಿಲ, LCRP ದಿವ್ಯ ಚತ್ರಪ್ಪಾಡಿ, ಶಾರದಾ ಭಾಗವಹಿಸಿದ್ದರು. ಗ್ರಂಥಪಾಲಕಿ ಅಭಿಲಾಷ ವಂದಿಸಿದರು. ಕಾರ್ಯದರ್ಶಿ ಯಮಿತಾ ಪೂರ್ಣಚಂದ್ರ ಪೈಕ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ