
ಸುಳ್ಯ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಫಲಾನುಭವಿಗಳಾದ ಯು. ಸಿ. ಸಹದೇವ ಅವರ ಪತ್ನಿ ಶ್ರೀಮತಿ. ಯು. ಎಸ್. ಶಾಂತಿ, ಚೆಂಬು ಇವರಿಗೆ ಅಂಜಿಯೋಪ್ಲಾಸ್ಟಿ ಗೆ ಸಂಬಂಧಿಸಿ ರೂ.50000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಇಂದು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯ ಮುಖ್ಯ ಮಾರುಕಟ್ಟೆ ಅಧಿಕಾರಿ ಜಯರಾಮ್ ಶೆಟ್ಟಿ , ಸುಳ್ಯ ಶಾಖೆಯ ಮುಖ್ಯ ಸಿಬ್ಬಂದಿ ಮಲ್ಲಿಕಾ, ಮತ್ತಿತರರು ಉಪಸ್ಥಿತರಿದ್ದರು.