
ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು 26 ಕಡೆ ಹಾಕಿದ್ದರು. ಸುಳ್ಯಕ್ಜೆ ಮುಖ್ಯಮಂತ್ರಿಗಳ ಆಗಮನದ ಹಿಂದಿನ ರಾತ್ರಿ ಕಿಡಿಗೇಡಿಗಳು 6 ಕಡೆಯ ಬ್ಯಾನರ್ ಅನ್ನು ಹೊಳೆಗೆ ಎಸೆದಿದ್ದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಜು.15 ರ ಒಳಗೆ ಬ್ಯಾನರ್ ತೆಗೆದಿರುವವರು ಪುನಃ ಅಳವಡಿಸದಿದ್ದರೇ ಜನರೆಲ್ಲಾ ಒಂದಾಗಿ ಊರಿನ ದೈವದ ಮುಂದೆ ಪ್ರಾರ್ಥನೆ ಮಾಡುವುದೆಂದು ತೀರ್ಮಾನಿಸಿದ್ದರು.
ಬ್ಯಾನರ್ ತೆಗೆದ ಕಿಡಿಗೇಡಿಗಳು ಪುನಃ ಅಳವಡಿಸದೇ ಇರುವುದರಿಂದ ಜು.16ರಂದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ಅಡ್ತಲೆ ಶ್ರೀ ಉಳ್ಳಾಕುಲು ದೈವಸ್ಥಾನದ ಮುಂದೆ ಪ್ರಾರ್ಥನೆ ಮಾಡಿದರು.