ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಆಡಳಿತ ಗಮನಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯ 26 ಕಡೆಗಳಲ್ಲಿ ಹಾಕಿದ್ದ ಬ್ಯಾನರ್ ಹಾಕಿದ್ದರು. ಮುಖ್ಯಮಂತ್ರಿಗಳು ಬರುವ ಹಿಂದಿನ ರಾತ್ರಿ 9 ಕಡೆ ಹಾಕಿದ್ದ ಬ್ಯಾನರ್ ಕಳವು ಗೈಯಲ್ಪಟ್ಟಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬ್ಯಾನರ್ ಕಳುವುಗೈದ ಕಿಡಿಗೇಡಿಗಳ ವಿರುದ್ಧ ದೈವದ ಮೊರೆ ಹೋಗುತ್ತೇವೆ ಎಂದಿದ್ದಾರೆ ಗ್ರಾಮಸ್ಥರು. ಇದೀಗ ಅರಂತೋಡು ತೊಡಿಕಾನ ರಸ್ತೆಯ ನೂಜಿಕಲ್ಲು ಎಂಬಲ್ಲಿ ಹೊಳೆಯಲ್ಲಿ ಬ್ಯಾನರ್ ಎಸೆದಿದ್ದಾರೆಂದೂ ತಿಳಿದು ಬಂದಿದೆ.
- Thursday
- November 21st, 2024