
ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆಯಲ್ಲಿ ಜು.13 ಬುಧವಾರದಂದು ವೇದವ್ಯಾಸ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಸಹಶಿಕ್ಷಕರಾದ ಶ್ರೀ ಗುರುಪ್ರಸಾದ್ ಭಟ್ ಗುರು ಪೂರ್ಣಿಮೆಯ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಗುರುಗಳಾದ ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಶ್ರೀ ವಿನೋದ್ ಕುಮಾರ್ ಇವರು ಧನ್ಯವಾದಗೈದರು. ಸಹ ಶಿಕ್ಷಕರಾದ ಶ್ರೀ ಉಮೇಶ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.