ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಕಳೆದ 2 ತಿಂಗಳ ಹಿಂದೆ ರಸ್ತೆಯುದ್ಧಕ್ಕೂ 26 ಕಡೆ ಈ ರಸ್ತೆಯ ನೊಂದ ಪಲಾನುಭವಿಗಳು ಹಾಕಿದ್ದರು. ಈ ಬ್ಯಾನರ್ ಗಳ ಪೈಕಿ ಹೆದ್ದಾರಿಗೆ ಕಾಣುವಂತೆ ವೈ ಎಮ್ ಕೆ ಚಡಾವು ಬಳಿ ಹಾಕಿರುವ ಬ್ಯಾನರ್ ಗಳನ್ನು ಕಳೆದ ರಾತ್ರಿ ಯಾರೋ ತೆರವು ಮಾಡಿದ್ದರು.
ಇದಕ್ಕೆ ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದು ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ನಮ್ಮ ಬಂಡವಾಳ ಬಯಲಾಗಬಾರದೆನ್ನುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳೇ ಈ ಕೃತ್ಯ ಮಾಡಿದ್ದಾರೆ. ಬ್ಯಾನರ್ ತೆರವು ಮಾಡಬಹುದು, ಜನರ ಮನಸ್ಸಿಂದ ಭಾವನೆಗಳನ್ನು ತೆರವು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
- Thursday
- November 21st, 2024