ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿಯ ಹೊಳೆಯಲ್ಲಿ ಎರಡೂ ಮೃತದೇಹ ಜು.12ರಂದು ಪತ್ತೆಯಾಗಿದೆ.
ಇಂದು ಬೆಳಿಗ್ಗೆ 10 ಗಂಟೆ ಬೈತಡ್ಕ ಸೇತುವೆಯಿಂದ 400 ಮೀಟರ್ ದೂರದಲ್ಲಿ ಹೊಳೆಯ ಬದಿ ಎರಡೂ ಮೃತದೇಹ ಪತ್ತೆಯಾಗಿದೆ.
ಜು. 10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರು ಪಾಲಾಗಿದ್ದರು. ಕಾರು ಜು.10ರಂದೇ ಮಧ್ಯಾಹ್ನ ಪತ್ತೆ ಹಚ್ಚಲಾಗಿತ್ತು. ಸ್ಥಳೀಯರು, ಊರವರು, ಅಗ್ನಿಶಾಮಕ ತಂಡ ಹಾಗೂ ಪೋಲೀಸರು ಹುಡುಕಾಟ ನಡೆಸಿದ್ದರು.