ಕಲಾಮಾಯೆ ಏನೆಕಲ್ ಸಾರಥ್ಯದಲ್ಲಿ ಅರೆಭಾಷೆ ಚಲನಚಿತ್ರ ಮೂಡಿಬರಲಿದ್ದು ಜು.15 ರಂದು ಉಬರಡ್ಕದ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಸ್ಥಾನದ ವಠಾರದಲ್ಲಿ ಪ್ರಾರ್ಥನಾ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಬಂಟಮಲೆ ಪ್ರಕಾಶನ ಪ್ರಕಟಿತ ವಿದ್ಯಾಧರ ಕುಡೆಕಲ್ಲು ಅವರ ಕೃತಿ ಆಧಾರಿತವಾಗಿ ಈ ಅರೆಭಾಷೆ ಚಲನಚಿತ್ರ ಮೂಡಿಬರಲಿದೆ.
ಕಲಾಮಾಯೆ ಸಂಸ್ಥೆಯು ಸುಮಾರು 7 ವರ್ಷಗಳಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಶೈಕ್ಷಣಿಕ ಬೆಳವಣಿಗೆ ಹಾಗೂ ಅರೆಭಾಷೆ ರಂಗಭೂಮಿ, ಸಿನಿಮಾ ರಂಗದ ಕಲಾಕಾರ್ಯಗಳ ಜೊತೆಗೆ, ಭಾಷಾ ಅಭಿವೃದ್ಧಿಗಾಗಿ ಮತ್ತು ಅರೆಭಾಷೆ ಕಲಾಕ್ಷೇತ್ರದ ಶ್ರೀಮಂತಿಕೆಗಾಗಿ ದುಡಿಯುತ್ತಾ ಬಂದಿದ್ದು ಸಂಸ್ಥೆಯ ಸಾಂಸ್ಕೃತಿಕ ಕಾರ್ಯಯೋಜನೆಗಳು ಜನ ಮನ್ನಣೆಗಳಿಸಿದೆ. ಇದಾಗಲೇ ಕಲಾಮಾಯೆ ಸಂಸ್ಥೆಯ ಸಾರಥ್ಯದಲ್ಲಿ ಅರಭಾಷೆ ಚಿತ್ರರಂಗಕ್ಕೆ 2 ಕಲಾ ಕಾಣಿಕೆಗಳು ಹೊರಬಂದಿದ್ದು ಸಾಮಾಜಿಕ ಸಂದೇಶವನ್ನು ಸಾರುವ ಮೂಲಕ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಂಸ್ಥೆಯ ಮೂರನೇ ಕಲಾಕಾಣಿಕೆಯಾಗಿ ಸುಳ್ಯದ ರೈತದಂಗೆಯ ನೇತಾರರ ಚರಿತ್ರೆಯನ್ನು ದೃಶ್ಯ ಮಾಧ್ಯಮಕ್ಕೆ ತರುವ ಸಲುವಾಗಿ ವಿದ್ಯಾಧರ ಕುಡೆಕಲ್ಲು ರವರ ಅಮರ ಸುಳ್ಯ – 1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಕೃತಿಯನ್ನು ಸುಮಾರು 2 ವರೆ ಗಂಟೆ ಅವಧಿಯ ಅರೆಭಾಷೆ ಚಲನಚಿತ್ರವಾಗಿ ನಿರ್ಮಾಣವಾಗಲಿದೆ. ಈ ಚಲನಚಿತ್ರದಲ್ಲಿ ತಾಲೂಕಿನ ನೂರಾರು ಕಲಾವಿದರಿಗೆ ಅವಕಾಶ ದೊರೆಯಲಿದ್ದು ಉತ್ತಮ ಪ್ರತಿಭೆಗಳು ಹೊರಬರಲಿದೆ ಎಂದು ನಿರ್ದೇಶಕ ಸುಧೀರ್ ಏನೆಕಲ್ ತಿಳಿಸಿದ್ದಾರೆ.