ಬಳ್ಪ ಗ್ರಾಮದ ಆಲ್ಕಬೆ ಎಂಬಲ್ಲಿ ಗುಡ್ಡ ಕುಸಿತ ಜು.4 ರಂದು ಗುಡ್ಡ ಕುಸಿದಿದ್ದು ಸಂಚಾರಕ್ಕೆ ತಡೆಯುಂಟಾಗಿದೆ.
ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಸಂಪೂರ್ಣವಾಗಿ ಕೆಸರುಮಯವಾಗಿ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಇನ್ನಷ್ಟೂ ಕುಸಿಯುವ ಭೀತಿಯಲ್ಲಿದೆ. ಪಂಚಾಯಿತಿಗೆ ಮನವಿ ಮಾಡಿದ್ದರು ಯಾವ ಕ್ರಮ ಇನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವರದಿ : ಅನನ್ಯ ಹೆಚ್. ಸುಬ್ರಹ್ಮಣ್ಯ