Ad Widget

ಬೊಳುಬೈಲು : ನವಚೇತನ ಚಿಣ್ಣರ ಕೂಟ ಉದ್ಘಾಟನೆ

ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇದರ ನವಚೇತನ ಚಿಣ್ಣರ ಕೂಟದ ಉದ್ಘಾಟನಾ ಸಮಾರಂಭ ಜು‌.3ರಂದು ಯುವಕ ಮಂಡಲದ ಸಭಾಭವನ ಯುವಸದನ ಬೊಳುಬೈಲುನಲ್ಲಿ ನಡೆಯಿತು.
ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇದರ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಉದ್ಯೋಗದ ಕಾರಣಕ್ಕಾಗಿ ಶಿಕ್ಷಣ ಪಡೆಯುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಕಡೆಗೂ ಗಮನ ಹರಿಸುವುದು ಅಗತ್ಯ. ಎಂದು ಹೇಳುತ್ತಾ ಸ್ಥಳೀಯ ಶಾಲೆಗಳತ್ತ ಯುವಕ ಮಂಡಲದಂತಹ ಸಂಸ್ಥೆಗಳು ಹೆಚ್ಚು ಗಮನ ಹರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಕ ಗಣೇಶ್ ಜಾಲ್ಸೂರು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕಾರ್ಯ ಆಗಬೇಕು ಮತ್ತು ಶಿಕ್ಷಕರು ಮಕ್ಕಳ ಜೊತೆ ಮಗುವಾದಾಗ ಮಾತ್ರ ಅವರ ವಿಕಸನ ಸಾಧ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ವಹಿಸಿದ್ದರು. ನವಚೇತನ ಚಿಣ್ಣರ ಕೂಟದ ಸಂಚಾಲಕ ಲಕ್ಷ್ಮೀನಾರಾಯಣ ಬೊಳುಬೈಲು ಮತ್ತು ಚಿಣ್ಣರ ಕೂಟದ ಅಧ್ಯಕ್ಷ ಮೋಕ್ಷಿತ್ ಅರ್ಭಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಕುಮಾರ್ ಅರ್ಭಡ್ಕ ಸ್ವಾಗತಿಸಿ, ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ ವಂದಿಸಿದರು. ಜತೆ ಕಾರ್ಯದರ್ಶಿ ಪ್ರವೀಣ ಕಾಟೂರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading