ಗುತ್ತಿಗಾರು ಗ್ರಾಮ ಪಂಚಾಯತ್‌ನ ಈ ಕೆಳಗಿನ ಕಾಣಿಸಿದ ಬಾಡಿಗೆ ಕಟ್ಟಡಗಳನ್ನು ದಿನಾಂಕ 04 – 07 – 2022 ನೇ ಸೋಮವಾರ ಅಪರಾಹ್ನ ಗಂಟೆ 3.00 ಕ್ಕೆ ಸರಿಯಾಗಿ ಗ್ರಾ.ಪಂ. ಕಛೇರಿಯಲ್ಲಿ ಬಹಿರಂಗವಾಗಿ ಏಲಂ ಮಾಡಲಾಗುವುದು. ಮೆಟ್ಟಿನಡ್ಕ ಬಸ್ಸು ತಂಗುದಾಣ ಅಂಗಡಿ ಕೋಣೆ, ಹಾಲೆಮಜಲು ಬಸ್ಸು ತಂಗುದಾಣ ಅಂಗಡಿ ಕೋಣೆ, ಕಮಿಲ ಬಸ್ಸು ತಂಗುದಾಣ ಅಂಗಡಿ ಕೋಣೆ, ಪುಚ್ಚೆಪ್ಪಾಡಿ ಬಸ್ಸು ತಂಗುದಾಣ ಅಂಗಡಿ ಕೋಣೆ, ಒಣ ಮೀನು ಮಾರುಕಟ್ಟೆ, ಗುತ್ತಿಗಾರು ಗ್ರಾಮದ ಸಂತೆ ಮಾರುಕಟ್ಟೆ ಬಳಿ ಇರುವ ಹಸಿ ಮೀನು ಮಾರುಕಟ್ಟೆ ಏಲಂ ನಡೆಯಲಿದೆ. ಷರತ್ತುಗಳನ್ನು ಕಛೇರಿ ಸಮಯದಲ್ಲಿ ಗ್ರಾಮ ಪಂಚಾಯತ್ ನಿಂದ ಪಡೆದುಕೊಳ್ಳಬಹುದು ಎಂದು ಗ್ರಾ.ಪಂ.ಪ್ರಕಟಣೆಯಲ್ಲಿ ತಿಳಿಸಿದೆ.
- Tuesday
- December 3rd, 2024