ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ ಜೂ.28 ರಂದು ಕಲ್ಮಕಾರು ಪದ್ನಡ್ಕದ ಕಮಲ ಎಂಬುವವರ ಮನೆಯ ಮಾಡಿನ ದುರಸ್ತಿ ಕಾರ್ಯ ಮಾಡಲಾಯಿತು. ಜೂ.28 ರಿಂದ ಜೂ.30 ರವರೆಗೆ ದುರಸ್ತಿ ಕಾರ್ಯ ನಡೆಸಲಾಯಿತು. ಜೂ.30 ರಂದು ಮನೆಯ ಸ್ವಚ್ಚತೆ ಮಾಡಿ ಮನೆಯವರಿಗೆ ಬಿಟ್ಟು ಕೊಡಲಾಯಿತು.
ಈ ಮಾಡಿನ ದುರಸ್ತಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 16 ಸಾವಿರ ರೂಪಾಯಿ ಅನುದಾನ ಒದಗಿಸಲಾಗಿತ್ತು.
ಈ ಕಾರ್ಯಕ್ಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳಿಯರು ಸಂಪೂರ್ಣ ಸಹಕಾರ ನೀಡಿದರು.
ವರದಿ :- ಉಲ್ಲಾಸ್ ಕಜ್ಜೋಡಿ