Ad Widget

ಸುಳ್ಯ : ಗುಂಡಿನ ದಾಳಿ ಪ್ರಕರಣ ಮೂವರು ಆರೋಪಿಗಳ ಬಂಧನ – ಗೆಳೆಯನೇ ಪ್ರಮುಖ ಆರೋಪಿ

ಸುಳ್ಯದಲ್ಲಿ ಜೂ.5 ರಂದು ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡವೊಂದು ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಭೇಧಿಸಿರುವ ಸುಳ್ಯ ಪೊಲೀಸರು ಮೂವರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳಗಿ ಕೊಲೆ ಪ್ರಕರಣದ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕುಶಾಲನಗರದ ಕೆ ಜಯನ್ (38), ಮಡಿಕೇರಿಯ ವಿನೋದ್ (34) ಹೆಚ್.ಎಸ್ ಮನೋಜ್ (25) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಕೋವಿ ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸಾಯಿಯವರ ಮೇಲೆ ಈ ತಂಡ ಸಮೀಪದಿಂದ ದಾಳಿ ನಡೆಸಿದ್ದು, ಚಿರಾಟ ಶಬ್ದ ಕೇಳಿ, ಕೆಲಸ ಮುಗಿಯಿತೆಂದು ಆರೋಪಿಗಳು ಕಾಲ್ಕಿತ್ತಿದ್ದರು. ಆದರೇ ಕೂದಲೆಳೆಯ ಅಂತರದಲ್ಲಿ ಪಾರಾದ ಸಾಯಿಯ ಬೆನ್ನಿನ ಎಡ ಬದಿಗೆ ತಾಗಿ ಕಾರಿನ ಬಲ ಬದಿಯ ಎರಡು ಡೋರ್‌ಗಳ ಮದ್ಯಕ್ಕೆ ಗುಂಡು ತಗುಲಿತ್ತು.

ಸಾಯಿ ಹಾಗೂ ಜಯನ್ ಮಿತ್ರರಾಗಿದ್ದು ಕೆಲವೊಂದು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ದೂರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಜಯನ್ ಗೆ ವಿನೋದ್ ಹಾಗೂ ಮನೋಜ್ ಮಿತ್ರರಾಗಿದ್ದು ಇವರನ್ನು ಸುಳ್ಯಕ್ಕೆ ಜತೆಗೆ ಕರೆದುಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಯನ್ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಮಹಮ್ಮದ್ ಶಾಹಿ ಈ ಹಿಂದೆ ಸಂಪತ್ ಕುಮಾರ್ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದು ಸಂಪತ್ ಕುಮಾರ್ ಕೊಲೆಯಾದ ನಂತರ ಆರೋಪಿಗಳಾದ ಮನೋಹರ್ ಮತ್ತು ಮನು ಈ ತಂಡದವರ ಜೊತೆ ವಿಶ್ವಾಸದಿಂದ ಇದ್ದು ಅವರಿಗೆ ಹಣಕಾಸಿನ ನೆರವು ನೀಡುತ್ತಿರುವುದಾಗಿ ಮತ್ತು ಸಂಪತ್ ಕೊಲೆಯಾದ ಸಮಯದಲ್ಲಿ ಮನು ಮತ್ತು ಮನೋಹರ್ ತಂಡದವರಿಗೆ ಮಾಹಿತಿ ನೀಡಿರುವುದಾಗಿ ಸಂಶಯವನ್ನು ಇಟ್ಟು ಕೊಂಡಿರುತ್ತಾನೆ. ಆದ್ದರಿಂದ ಜಯನ್, ಮಹಮ್ಮದ್ ಶಾಹಿಯ ಮೇಲೆ ದ್ವೇಷ ಸಾಧಿಸಿಕೊಂಡು ಬಂದಿರುತ್ತಾರೆ ಎಂದು ಹೇಳಲಾಗಿದೆ.

ಸುಳ್ಯಕ್ಕೆ ಬಂದ ಆರೋಪಿಗಳು ಆರೋಪಿಗಳು ನಾರ್ಕೋಡಿಗೆ ಹೋಗಿ ಕಾಯುತ್ತಿದ್ದರು. ಸಾಯಿ ಸುಳ್ಯಕ್ಕೆ ಬರುವ ಮಾಹಿತಿಯನ್ನು ಆರೋಪಿಗಳಿಗೆ ಯಾರು ನೀಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬರಬೇಕಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ನಡೆಸಿ ಕೇವಲ 3 ದಿನದಲ್ಲಿ ಪ್ರಕರಣ ಭೇಧಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋಣಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ ಕುಮಾರಿ ಮತ್ತು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ದಿಲೀಪ್ ಜಿ ಆರ್ ಮತ್ತು ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸುಳ್ಯ ಎಸ್‌ಐ ದಿಲೀಪ್ ಜಿ.ಆರ್, ಅಪರಾಧ ವಿಭಾಗದ ಎಸ್ಐ ರತ್ನಕುಮಾರ್, ಪಿಎಸ್ಐ ಸರಸ್ವತಿ ಬಿ.ಟಿ, ಎಎಸ್ಐಗಳಾದ ರವೀಂದ್ರ, ಶಿವರಾಮ, ಹೆಚ್.ಸಿಗಳಾದ ಧನೇಶ್, ಉದಯ ಗೌಡ, ಪಿಸಿಗಳಾದ ಅನಿಲ್, ಅನುಕುಮಾರ್, ಹೈದರಾಲಿ, ಸುನಿಲ್ ತಿವಾರಿ, ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!