Ad Widget

ಕುಮ್ ಕುಮ್ ಪ್ಯಾಶನ್ ನಲ್ಲಿ ರಿಯಾಯಿತಿ ದರದಲ್ಲಿ ರೈನ್ ಕೋಟ್ ಮಾರಾಟ

ವಸ್ತ್ರ ವ್ಯಾಪಾರದಲ್ಲಿ ಹೆಸರುಗಳಿಸಿರುವ ಸುಳ್ಯದ ಕುಮ್ ಕುಮ್ ಪ್ಯಾಶನ್ ನಲ್ಲಿ Zeel ಕಂಪೆನಿಯ ರೈನ್ ಕೋಟ್ ಗಳ ಅಮೋಘ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ. ಮಳೆಗಾಲ ಆರಂಭದೊಂದಿಗೆ ಶಾಲಾ ಕಾಲೇಜುಗಳು ಪ್ರಾರಂಭಗೊಂಡಿದ್ದು, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ Zeel ಕಂಪನಿಯ ರೈನ್ ಕೋಟ್ ಗಳ ಅಪೂರ್ವ ಸಂಗ್ರಹ ಮಾಡಲಾಗಿದ್ದು ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತದೆ...

ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ : ಸುಳ್ಯ – ಕೊಡಿಯಾಲಬೈಲ್ ರಸ್ತೆಯ ಬಗ್ಗೆ ಅಳಲು ತೋಡಿಕೊಂಡ ಜನತೆ

ಸುಳ್ಯ - ಕೊಡಿಯಾಲಬೈಲ್ ರಸ್ತೆಯು ಕಂಬಳದ ಗದ್ದೆಯಂತಾಗಿದ್ದು, ಸಂಚಾರ ದುಸ್ತರವಾಗಿದೆ. ಸೇತುವೆಯ ಮೇಲೆ ಮಳೆನೀರು ನಿಂತು ಹೊಳೆಯಂತಾಗಿದೆ. ಕೆಲ ವರ್ಷಗಳಿಂದ ಈ ರಸ್ತೆ ಸಂಪೂರ್ಣ ದುರಸ್ತಿ ಕಾಣದೇ ಕಂಬಳದ ಗದ್ದೆಯಂತಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಬೋರ್ಡ್ ಹಾಕಿ "ದಯವಿಟ್ಟು ನಮ್ಮ ರಸ್ತೆ ಸರಿ ಮಾಡಿ ಕೊಡಿ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರಕಾರಿ ಪ್ರಥಮ ದರ್ಜೆ...
Ad Widget

ಕೋಲ್ಚಾರು : ರಸ್ತೆ ಬದಿಯ ಮರಗಳು ಬೀಳುವ ಸ್ಥಿತಿಯಲ್ಲಿದ್ದರೂ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳು

ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿಡಬ್ಲ್ಯೂ ಡಿ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗಮನಹರಿಸದೇ ನಿರ್ಲಕ್ಷ್ಯ ವಹಿಸುತ್ತಿದೆ. ಮರ ಕಡಿಯಲು ಅನುಮತಿ ನೀಡದ ಕಾರಣ ರಸ್ತೆ ಬದಿಯಲ್ಲಿರುವ ಮರಗಳು ಬೀಳುವ ಸ್ಥಿತಿಯಲ್ಲಿದ್ದು ಸಾರ್ವಜನಿಕರು ಭಯದ ಸ್ಥಿತಿಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರ ಕಡಿಯಲು ಸಚಿವರು ಅಧಿಕಾರಿಗಳಿಗೆ ಮರ ಕಡಿಸಲು...

ಪೀಸ್ ಸ್ಕೂಲ್ ವತಿಯಿಂದ ‘ಕಲಿಕೆಯಲ್ಲಿ ಬದಲಾವಣೆಯತ್ತ ‘ಸಂವಾದ ಕಾರ್ಯಕ್ರಮ

ಸುಳ್ಯ ಪೈಚಾರ್ ಬೊಳುಬೈಲ್ ಬಳಿ ಇರುವ ಪೀಸ್ ಸ್ಕೂಲ್ ವತಿಯಿಂದ ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಕಲಿಕೆ ಬದಲಾವಣೆಯತ್ತ ಎಂಬ ವಿಷಯದಲ್ಲಿ ಶೈಕ್ಷಣಿಕ ತಜ್ಞರು ಹಾಗೂ ಮಾನಸಿಕ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಮೆ. 18 ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಮೊಟಿವೆಟ್ಲಾಝ್ ತರಭೇತಿ ಸಂಸ್ಥೆಯ ಆಡಳಿತ ನಿರ್ದೇಶಕಿ‌ ನಶ್ರೀನ್ ಅಹ್ಮದ್ ಬಾವ ಗುಣಮಟ್ಟ ಹಾಗೂ ಪ್ರಾಯೋಗಿಕ ಶಿಕ್ಷಣ,ಜೀವನ...

ಹರಿಹರ ಪಲ್ಲತ್ತಡ್ಕ :- ಶ್ರೀ ಹರಿಹರೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಮೇ.18 ರಂದು ನಡೆಯಿತು.ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಐನೆಕಿದು ಗ್ರಾಮದ ಕಿಶೋರ್ ಕುಮಾರ್ ಕೂಜುಗೋಡು ಅವರು ಆಯ್ಕೆಯಾದರು.ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾಗಿ ಹರಿಹರ ಪಲ್ಲತ್ತಡ್ಕ ಗ್ರಾಮದ ಆನಂದ ಕೆರೆಕ್ಕೋಡಿ, ಐನೆಕಿದು ಗ್ರಾಮದ ಭವಾನಿಶಂಕರ ಪೈಲಾಜೆ, ಬಾಳುಗೋಡು ಗ್ರಾಮದ ರೇಷ್ಮಾ ಪ್ರಕಾಶ್ ಕಟ್ಟೆಮನೆ,...

ಪ್ರಭಾಕರ ಶೆಟ್ಯಡ್ಕ ನಿಧನ

ಹರಿಹರ ಪಲ್ಲತ್ತಡ್ಕ ಗ್ರಾಮದ ಶೆಟ್ಯಡ್ಕ ಪ್ರಭಾಕರ ಅವರು ಮೇ.17 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಲ್ಪನಾ, ಮಕ್ಕಳಾದ ಸಚಿನ್, ಸೃಜನ್ ಹಾಗೂ ಸಹೋದರರು, ಸಹೋದರಿಯರು ಹಾಗೂ ಬಂಧು ಮಿತ್ರರರನ್ನು ಅಗಲಿದ್ದಾರೆ.

ಅರಂತೋಡು : ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಬಿಡುಗಡೆ

ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್( ರಿ)ಅಧೀನದಲ್ಲಿರುವ ಉದಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ಅನ್ವಾರುಲ್ ಹುದಾ ಶಾದಿ ಮಹಲ್ ಕಟ್ಟಡದ ಉದ್ಘಾಟನಾ ಸಮಾರಂಭ ಮೇ.20 ರಂದು ಸಂಜೆ ಜರಗಲಿದ್ದು ಈ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಮೇ 17 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು. ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್...

ಸಹಾಯಕ ನಿಬಂಧಕರಾದ ತ್ರಿವೇಣಿಯವರು ವೆಂಕಟರಮಣ ಸೊಸೈಟಿಗೆ ಭೇಟಿ

ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ನೂತನ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿಯವರು ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಇಂದು ಪ್ರಥಮ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ನಿಬಂಧಕರನ್ನು ಸಂಸ್ಥೆಯ ಅಧ್ಯಕ್ಷರಾದ ಪಿ.ಸಿ ಜಯರಾಮರವರು ಗೌರವಿಸಿದರು. ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಕೆ.ಟಿ ವಿಶ್ವನಾಥ್, ಜನರಲ್ ಮ್ಯಾನೇಜರ್ ಚಂದ್ರಶೇಖರ.ಎಂ, ಸುಳ್ಯ ಶಾಖಾ ವ್ಯವಸ್ಥಾಪಕರಾದ...

ನಾಳೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ : ಸಚಿವ ಬಿ.ಸಿ ನಾಗೇಶ್

ನಾಳೆ ಮಧ್ಯಾಹ್ನ 12.30ಕ್ಕೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ, ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್.ಎಂ.ಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಕುರಿತು ಮಾಹಿತಿ...

ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ವಿಶೇಷ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ದ, ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಸಹಕಾರ ಇಲಾಖೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಮಿಟೆಡ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ...
Loading posts...

All posts loaded

No more posts

error: Content is protected !!