- Thursday
- November 21st, 2024
ಸ ಕಿ ಪ್ರಾ ಶಾಲೆ ಸೇವಾಜೆಯಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರ ಸಹಕಾರದೊಂದಿಗೆ ಮೇ.07ರಂದು ಶ್ರಮದಾನ ನಡೆಯಿತು. ಶಾಲಾ ಆವರಣ ಗೋಡೆಗೆ ಅವಶ್ಯವಾಗಿರುವ ಮಣ್ಣನ್ನು ಸತತ ಮೂರನೇ ಬಾರಿ ಹೊತ್ತು ಸಮತಟ್ಟು ಮಾಡಿ ಶ್ರಮದಾನದ ಮೂಲಕ ಸಹಕರಿಸಿ ಶಾಲೆ ಹಾಗೂ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯದಲ್ಲೂ ಶ್ರಮದಾನದ ಮೂಲಕ ಸಹಕರಿಸಿರುತ್ತಾರೆ....
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಜರುಗಿತು. ಈ ಸಂದರ್ಭದಲ್ಲಿ ಜನರು ತಾಲೂಕು ಕಚೇರಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ತಿಳಿದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು...
ಐವರ್ನಾಡು ಗ್ರಾಮದ ಜಗತ್ ಜಬಳೆ ರವರ ಮನೆಯಲ್ಲಿ ಅಪರೂಪದ ಬ್ರಹ್ಮಕಮಲ ಪುಷ್ಪ ನಿನ್ನೆ ರಾತ್ರಿ ಅರಳಿದ್ದು ಮನಮೋಹನ ದೃಶ್ಯವನ್ನು ನೀಡಿದೆ. ಬಹಳ ಅಪರೂಪವಾಗಿ ಕಂಡುಬರುವ ಈ ಪುಷ್ಪವು ರಾತ್ರಿ ಸಮಯದಲ್ಲಿ ಅರಳುವುದು ವಿಶೇಷ.
ಸ.ಕಿ.ಪ್ರಾ ಶಾಲೆ ವಾಲ್ತಾಜೆಯಲ್ಲಿ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇವರು ನಿರ್ವಹಿಸುತ್ತಿರುವ ಮಕ್ಕಳ ಬೇಸಿಗೆ ಶಿಬಿರ 2022 ರ ಶಿಬಿರಾರ್ಥಿಗಳಿಗೆ ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆಯ ವತಿಯಿಂದ ಸಾಹಿತ್ಯ ಕೃತಿಗಳನ್ನು ವಿತರಿಸಲಾಯಿತು.ಕಿರಣ ಸಂಸ್ಥೆ ಅಧ್ಯಕ್ಷ ಸಾಹಿತಿ ಯೋಗೀಶ್ ಹೊಸೋಳಿಕೆ, ಜಲಶ್ರೀ ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಕಡ್ಲಾರು, ಕಿರಣ ಸಂಸ್ಥೆಯ ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್ ವೈ...
ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ3ನೇ ವರ್ಷದ ವಾರ್ಷಿಕೋತ್ಸವಮೇ. 7ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಿತು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಉದಯ ಕೆ.ಯವರು ದೀಪ ಪ್ರಜ್ವಲನೆಗೊಳಿಸಿದರು. ನಂತರ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಟುಕುಕ್ಕೆ ಭಜನಾ...
ವಿವಾಹಿತ ಯುವತುಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಗಾಂಧಿನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವರದಿಯಾಗಿದೆ. ಸುಳ್ಯ ಗಾಂಧಿನಗರ ಕೆರೆಮೂಲೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಮೀನ ಎಂಬವರ ಪುತ್ರಿ ಆಯೀಶಾ ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವತಿ.ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಈಕೆಯನ್ನು ನೋಡಿದ ಮನೆಯವರು ಕೂಡಲೇ ಕೆಳಗಿಳಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ...
ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದ, ಕರ್ನಾಟಕ ಯಕ್ಷ ರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಇವರಿಗೆ 2021-22ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಲಭಿಸಿದೆ. ಜೀವನ ರಾಂ ಅವರು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಕಳೆದ 25 ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಕಲಾ ವೇದಿಕೆಯು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ....
ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ದೋಲನ ಕುಟುಂಬದ ತರವಾಡು ಮನೆಯಲ್ಲಿ ಮೇ.04 ಮತ್ತು ಮೇ.05 ರಂದು ಶ್ರೀ ಧರ್ಮದೈವ ಮತ್ತು ಉಪ ದೈವಗಳ ಪ್ರತಿಷ್ಠಾ ದಿನದ ಪ್ರಯುಕ್ತ ಶ್ರೀ ದೈವಗಳ ನೇಮೋತ್ಸವ ಹಾಗೂ ತಂಬಿಲ ಸೇವೆ ನಡೆಯಿತು. ಮೇ.04 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ ಮತ್ತು ವಾರ್ಷಿಕ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆಯಿತು....
ಗುತ್ತಿಗಾರಿನ ಮುತ್ತಪ್ಪ ನಗರದ ಬಿಂದುಶ್ರೀ ಸಂಕೀರ್ಣದಲ್ಲಿ ಮೇ.6 ರಂದು ಡಾ.ನಿಶಾಂತ್ ಆರ್ನೋಜಿ ಮಾಲಿಕತ್ವದ ಶತಾಯು ಆಯುರ್ವೇದ ಕ್ಲಿನಿಕ್ ಶುಭಾರಂಭಗೊಂಡಿತು. ಎ.ಓ.ಎಲ್.ಇ.ಸುಳ್ಯ ಇದರ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ರವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ ವೃತ್ತಿಯಲ್ಲಿ ಪ್ರಾಮಾಣಿಕತೆ ಜತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕೃಷಿಕ, ಸುಳ್ಯ ಕ.ಸಾ.ಪ.ಮಾಜಿ ಅಧ್ಯಕ್ಷ ಎ.ಕೆ.ಹಿಮಕರ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ಜಿ.ಆಯುರ್ವೇದ ಆಸ್ಪತ್ರೆ ಸುಳ್ಯ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಲೆ ಕುಡಿಯ ಜನಾಂಗದ ಪಂಚಪರ್ವ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದ್ದರ ವಿರುದ್ಧ ಪ್ರತಿಭಟನೆ ನಡೆಯಿತು. ಮಲೆಕುಡಿಯ ಹಿತ ರಕ್ಷಣೆಯ ವೇದಿಕೆಯ ಸಂಚಾಲಕರಾದ ಪದ್ಮಕುಮಾರ ಗುಂಡಡ್ಕ ಪ್ರಸ್ತಾವಿಕವಾಗ ಮಾತನಾಡಿ ದೇವಸ್ಥಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವಾಗ ಭಕ್ತಿಯಿಂದ ಸೇವೆ ಸಲ್ಲಿಸಿದವರು ಮಲೆಕುಡಿಯ ಜನಾಂಗ, ಇದೀಗ ಏಕಾಎಕಿ ಸೇವೆಯಿಂದ ವಜಾಗೊಳಿಸಿದ್ದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು....
Loading posts...
All posts loaded
No more posts