Ad Widget

ಸುಬ್ರಹ್ಮಣ್ಯ : ಸ್ಕೌಟ್ ಗೈಡ್ಸ್ ಘಟಕದ ಬೇಸಿಗೆ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಸ್ಕೌಟ್ ಗೈಡ್ಸ್ ಘಟಕದ ಬೇಸಿಗೆ ಶಿಬಿರ ಮೇ. 30 ರಂದು ಉದ್ಘಾಟನೆಗೊಂಡಿತು. ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಅಧ್ಯಾಪಕ ಮೋಹನ ಗೌಡ ಶಿಬಿರ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯಸ್ಥರಾಗಿರುವ ಯಶವಂತ ರೈಯವರು ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಮಾಸ್ಟರ್ ಸತೀಶ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗೈಡ್ ಕ್ಯಾಪ್ಟನ್ ಸ್ಮಿತಾ ಕೆ.ಎಸ್., ಅಧ್ಯಾಪಕ ಕೃಷ್ಣಾಭಟ್, ಸ್ಕೌಟ್ ಗೈಡ್ಸ್ ನಾಯಕ ಚಿನ್ಮಯ್ ಡಿ.ಎಸ್. ಮತ್ತು ಭಾನುಶ್ರೀ ಉಪಸ್ಥಿತರಿದ್ದರು. ಅನನ್ಯ ಎಸ್. ಸ್ವಾಗತಿಸಿ, ಅಂಕಿತಾ ಎಂ.ಎನ್. ವಂದಿಸಿ, ಆಶ್ಲೇಷ್ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!