ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರುವಿನಲ್ಲಿ ಶ್ರೀಮಾತಾ ಎಂಬ ಹೆಸರಿನ ನೂತನ ಪ್ರಗತಿಬಂಧು ಸಂಘವು ಮೇ.29 ರಂದು ಉದ್ಘಾಟನೆಗೊಂಡಿತು.
ನೂತನ ಸಂಘದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ದೋಣಿಪಳ್ಳ ನೆರವೇರಿಸಿದರು. ನೂತನ ಸಂಘದ ಪ್ರಬಂಧಕರಾಗಿ ಗಾಯತ್ರಿ ಕೊಳಗೆ, ಸಂಯೋಜಕರಾಗಿ ನಮಿತಾ ಅಂಬೆಕಲ್ಲು, ಕೋಶಾಧಿಕಾರಿಯಾಗಿ ದಿವ್ಯಾ ತೀರ್ಥರಾಮ ನಾಲಡ್ಕ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಶ್ರೀಮತಿ ಸಾವಿತ್ರಿ ಹಾಗೂ ಶ್ರೀಮತಿ ಶೋಭಾ ಇವರುಗಳು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ