ಸಂಪಾಜೆ ಸರಕಾರಿ(ಆರ್ .ಎಂ.ಎಸ್.ಎ) ಪ್ರೌಢಶಾಲಾ ಮಂತ್ರಿಮಂಡಲ ರಚನೆ ಮೇ.27 ರಂದು ನಡೆಯಿತು
ಮೇ. 27ರಂದು ನಡೆದ ಮತದಾನದಲ್ಲಿ ನೆಲೋನ್ ಜೋಶ್ವ ಫೆರ್ನಾಂಡಿಸ್ ಹಾಗೂ ಶಿಬಿಲಾ ಸ್ಪರ್ಧಿಸಿದ್ದರು. ಮತದಾನ ಕೇಂದ್ರದ ಪ್ರಿಸೈಡಿಂಗ್ ಆಫಿಸರ್ ಆಗಿ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಪೋಲಿಂಗ್ ಆಫೀಸರ್ ಆಗಿ ಪರಿಮಳ,ಇಂದಿರಾ ಹಾಗೂ ವಿಷ್ಣು ಪ್ರಕಾಶ್ ಕರ್ತವ್ಯ ನಿರ್ವಹಿಸಿದರು. ನೆಲೋನ್ ಜೋಶ್ವ ಫೆರ್ನಾಂಡಿಸ್ ನಾಯಕನಾಗಿ ಹಾಗೂ ಶಿಬಿಲಾ ವಿರೋಧ ಪಕ್ಷದ ನಾಯಕಿಯಾಗಿ ಘೋಷಿಸಿದರು. ಸಭಾಪತಿ ವಿಷ್ಣುಪ್ರಿಯ, ಸ್ವಚ್ಛತಾ ಮಂತ್ರಿ ಮೋಕ್ಷ ಮತ್ತು ರಮ್ಯ, ಸಾಂಸ್ಕೃತಿಕ ಮಂತ್ರಿ ಜಶ್ಮಿತಾ ಮತ್ತು ಪಲ್ಲವಿ, ಶೈಕ್ಷಣಿಕ ಮಂತ್ರಿ ರಕ್ಷಾಶ್ರೀ ಮತ್ತು ಯಶಸ್ವಿನಿ, ಕ್ರೀಡಾ ಮಂತ್ರಿ ಗೌತಮ್ ಮತ್ತು ರಿಫಾಯಿ, ಗೃಹಮಂತ್ರಿ ಮನ್ವಿತ್ ಮತ್ತು ರೋಹಿತ್ ಚಂದ್ರ, ನೀರಾವರಿ ಮಂತ್ರಿ ಶರತ್ ಮತ್ತು ನಿತಿನ್, ಆರೋಗ್ಯ ಮಂತ್ರಿ ಶಿಲ್ಪಾ ಮತ್ತು ಶೃತಿ, ವಾರ್ತಾ ಮಂತ್ರಿ ತೃಪ್ತಿ ಮತ್ತು ಕ್ಷಮಾ, ಕೃಷಿಮಂತ್ರಿ ತಶ್ರೀಫ್, ಆಶಿತ್ ಹಾಗೂ ತನ್ವೀರ್, ಶಿಸ್ತು ಮಂತ್ರಿಯಾಗಿ ಶ್ರದ್ಧಾ ಮತ್ತು ಕಾವ್ಯ ಎ.ವಿ. ಆಯ್ಕೆಯಾದರು.
- Thursday
- November 21st, 2024