ಐನೆಕಿದು ಹಾಲುತ್ಪಾದಕರ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆಯು ಮೇ.17 ರಂದು ಸಂಘದ ರಿಟರ್ನಿಂಗ್ ಅಧಿಕಾರಿಯಾದ ಬಿ.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೂಜುಗೋಡು, ಉಪಾಧ್ಯಕ್ಷರಾಗಿ ಸವಿತಾ ಕೋಡಿಯಡ್ಕ ಹಾಗೂ ನೂತನ ನಿರ್ದೇಶಕರುಗಳಾಗಿ ಅಜಿತ್ ಕುಮಾರ್, ಡೋಜಪ್ಪ.ಪಿ, ಕಿರಣ.ಪಿ, ಹರಿಪ್ರಸಾದ್.ಕೆ, ಚಿದಾನಂದ.ಎಂ, ರಮೇಶ್.ಕೆ, ಶ್ರೀಮತಿ ಶಿಲ್ಪಾ.ಕೆ, ರಾಮಚಂದ್ರ.ಟಿ ಇವರುಗಳು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಾಲುತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರೇಮಾ ಶಶಿಧರ್ ಕೆದಿಲ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ