ಕೊಡಿಯಾಲ ಗ್ರಾಮದ ಮರಿಕೆ ಕಾಲೋನಿಯಲ್ಲಿ ವಿದ್ಯುತ್ ಲೈನ್ ಕಡಿತಗೊಂಡಿದ್ದು, ನಿನ್ನೆ ಬೆಳಿಗ್ಗೆಯಿಂದ ವಿದ್ಯುತ್ ಇಲ್ಲದೆ ಕಾಲೋನಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಲೋನಿ ನಿವಾಸಿಗಳು ಪಂಚಾಯತ್ ನಳ್ಳಿ ನೀರನ್ನೇ ಆಶ್ರಯಿಸಿದ್ದು, ವಿದ್ಯುತ್ ಸಮಸ್ಯೆಯಿಂದ ಪರದಾಡುವಂತಾಗಿದೆ.
ಈ ಭಾಗದ ಲೈನ್ ಮ್ಯಾನ್ ರಜೆಯಲ್ಲಿದ್ದು, ಬೇರೆ ಲೈನ್ ಮ್ಯಾನ್ ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ವಿದ್ಯುತ್ ಸಹಾಯವಾಣಿಗೆ ದೂರು ನೀಡಲಾಗಿದ್ದರೂ, ಸೂಕ್ತ ಸ್ಪಂದನೆ ದೊರಕಿಲ್ಲ ಎಂದು ಸ್ಥಳೀಯ ನಿವಾಸಿ ಕರ್ನಾಟಕ ರಾಷ್ಟ್ರ ಸಮಿತಿ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಅಮರಸುದ್ದಿಗೆ ತಿಳಿಸಿದ್ದಾರೆ.
- Saturday
- November 23rd, 2024