
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿನಿ ಪ್ರತೀಕ್ಷಾ.ಡಿ.ಎಸ್ ಇವರು ಮಡಿಕೇರಿ 19ಕೆಎಆರ್ ಬೆಟಾಲಿಯನ್ ನಿಂದ ಬೆಂಗಳೂರುನಲ್ಲಿ ನಡೆಯುವ ಇಂಟರ್ ಗ್ರೂಪ್ ಫೈರಿಂಗ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ. ಇವರಿಗೆ ಕಾಲೇಜಿನ ಲೆಪ್ಟಿನೆಂಟ್ ಸೀತಾರಾಮ.ಎಂ.ಡಿ ಇವರು ತರಬೇತಿ ನೀಡಿರುತ್ತಾರೆ. ಇವರು ಎನ್.ಎಂ.ಸಿ ಪದವಿ ಕಾಲೇಜಿನ ದ್ವಿತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ. ಗುತ್ತಿಗಾರು ಗ್ರಾಮದ ವಳಲಂಬೆ ಗೋಳಿಯಡ್ಕ ದೋಲನಮನೆ ಡಿ.ಸತ್ಯನಾರಾಯಣ ಹಾಗೂ ಲಲಿತಾ.ಡಿ.ಎಸ್ ಇವರ ಪುತ್ರಿ