ಸುಳ್ಯ ಪೈಚಾರ್ ಬೊಳುಬೈಲ್ ಬಳಿ ಇರುವ ಪೀಸ್ ಸ್ಕೂಲ್ ವತಿಯಿಂದ ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಕಲಿಕೆ ಬದಲಾವಣೆಯತ್ತ ಎಂಬ ವಿಷಯದಲ್ಲಿ ಶೈಕ್ಷಣಿಕ ತಜ್ಞರು ಹಾಗೂ ಮಾನಸಿಕ ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಮೆ. 18 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮೊಟಿವೆಟ್ಲಾಝ್ ತರಭೇತಿ ಸಂಸ್ಥೆಯ ಆಡಳಿತ ನಿರ್ದೇಶಕಿ ನಶ್ರೀನ್ ಅಹ್ಮದ್ ಬಾವ ಗುಣಮಟ್ಟ ಹಾಗೂ ಪ್ರಾಯೋಗಿಕ ಶಿಕ್ಷಣ,ಜೀವನ ಕೌಶಲ್ಯಗಳ ಬಗ್ಗೆ, ಇಸ್ಲಾಮಿಕ್ ವಿಜ್ಞಾನ ಸಮತೋಲಿತ ಆಧ್ಯಾತ್ಮಿಕ ಜೀವನ ಉತ್ತೇಜನದ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ತರಭೇತಿ ನೀಡಿ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಲಫಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲಾ ಪಿ.ಎಂ,ಪೀಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ ಅಬೂಭಕ್ಕರ್, ಪೈಚಾರ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಪಿ ಅಬ್ಬಾಸ್,ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.
ಪೀಸ್ ಸ್ಕೂಲ್ ಪ್ರಾಂಶುಪಾಲ ಸೈಪುಲ್ಲಾ ಸ್ವಾಗತಿಸಿ ಪೀಸ್ ಸ್ಕೂಲ್ ಸಂಚಾಲಕ ಸಂಶುದ್ದೀನ್ ಕಾರ್ಯಕ್ರಮ ನಿರೂಪಿಸಿಸಿ ವಂದಿಸಿದರೂ.
- Thursday
- November 21st, 2024