ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ನಿವಾಸಿ ಉದ್ಯಮಿ ಕುಶಾಲಪ್ಪ ಗೌಡ ಗೆಜ್ಜೆ ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು . ಮೃತರು ಪತ್ನಿ ಪುಷ್ಪಲತಾ, ಓರ್ವ ಪುತ್ರ ಹರ್ಷಿತ್, ಪುತ್ರಿ ರಕ್ಷಿತಾ, ಸಹೋದರರನ್ನು ಮತ್ತು ಸಹೋದರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ ಕೆಲವು ವರ್ಷಗಳಿಂದ ಕುಕ್ಕುಜಡ್ಕದಲ್ಲಿ ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಉದ್ಯಮ ನಡೆಸಿಕೊಂಡು ಬರುತ್ತಿದ್ದರು. ಕೊಡುಗೈ ದಾನಿಯಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.