ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿಡಬ್ಲ್ಯೂ ಡಿ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗಮನಹರಿಸದೇ ನಿರ್ಲಕ್ಷ್ಯ ವಹಿಸುತ್ತಿದೆ. ಮರ ಕಡಿಯಲು ಅನುಮತಿ ನೀಡದ ಕಾರಣ ರಸ್ತೆ ಬದಿಯಲ್ಲಿರುವ ಮರಗಳು ಬೀಳುವ ಸ್ಥಿತಿಯಲ್ಲಿದ್ದು ಸಾರ್ವಜನಿಕರು ಭಯದ ಸ್ಥಿತಿಯಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರ ಕಡಿಯಲು ಸಚಿವರು ಅಧಿಕಾರಿಗಳಿಗೆ ಮರ ಕಡಿಸಲು ಖಡಕ್ ಸೂಚನೆ ನೀಡಿದ್ದರೂ ಇದುವರೆಗೆ ಕೂಡ ಒಂದು ಮರ ಕಡಿಯಲು ಸಾಧ್ಯವಾಗಿರುವುದಿಲ್ಲ. ಇಷ್ಟು ಮಾತ್ರವಲ್ಲದೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸದೆ ಇರುವುದರಿಂದ ಈ ಭಾಗದ ಜನತೆ , ಶಾಲಾ ಮಕ್ಕಳು ಭಯದಿಂದ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಇವರನ್ನು ಸಂಪರ್ಕಿಸಿದಾಗ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮರ ಕಡಿಯಲು ಅನುಮತಿಯಾಗಲಿ, ವಿದ್ಯುತ್ ಕಂಬ ಬದಲಾಯಿಸುವುದಾಗಲಿ ಆಗದೆ ಇಲ್ಲದಿರುವುದರಿಂದ ಜನರು ಭಯದಲ್ಲಿ ಸಂಚರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಒತ್ತಡ ಹಾಕಿದ್ದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ.
- Thursday
- November 21st, 2024