Ad Widget

ಗುತ್ತಿಗಾರು :- ಅಮರ ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪಿ.ಎಂ.ಎಫ್.ಎಂ.ಇ ಚೆಕ್ ವಿತರಣಾ ಕಾರ್ಯಕ್ರಮವು ಮೇ.10 ರಂದು ನಡೆಯಿತು.
ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ನೂತನ ಅಧ್ಯಕ್ಷರಾಗಿ ದಿವ್ಯಾ ಸುಜನ್ ಗುಡ್ಡೆಮನೆ, ಉಪಾಧ್ಯಕ್ಷರಾಗಿ ಸವಿತಾ ಕುಳ್ಳಂಪಾಡಿ, ಕಾರ್ಯದರ್ಶಿಯಾಗಿ ಯಮಿತಾ ಪೂರ್ಣಚಂದ್ರ, ಜೊತೆ ಕಾರ್ಯದರ್ಶಿಯಾಗಿ ಗೀತಾ, ಖಜಾಂಜಿಯಾಗಿ ಸೆಲಿನಾ ಸೆಬಾಸ್ಟಿಯನ್ ಇವರುಗಳು ಆಯ್ಕೆಯಾದರು.
ಹಾಗೂ ಗ್ರಾಮ ಪಂಚಾಯತ್ ಪಿ.ಡಿ.ಓ ಧನಪತಿ ಅವರು ಪಂಚಶ್ರೀ ಸ್ತ್ರೀ ಶಕ್ತಿ ಸಂಘದ ಸದಸ್ಯೆ ಕುಮುದಾ ಅವರಿಗೆ ಪಿ.ಎಂ.ಎಫ್.ಎಂ.ಇ ಚೆಕ್ ಅನ್ನು ಹಸ್ತಾಂತರ ಮಾಡಿದರು.
ಸಭೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಪಿ.ಡಿ.ಓ ಧನಪತಿ, ಎನ್.ಆರ್.ಎಲ್.ಎಂ ತಾಲೂಕು ಮೇಲ್ವಿಚಾರಕರಾದ ಮಹೇಶ್, ಕ್ಲಸ್ಟರ್ ಮೇಲ್ವಿಚಾರಕರಾದ ಅವಿನಾಶ್, ಮಾಜಿ ಅಧ್ಯಕ್ಷರಾದ ರವಿಕಲಾ ಚೆಮ್ನೂರು ಮುಂತಾದವರು ಉಪಸ್ಥಿತರಿದ್ದು ಪದಾಧಿಕಾರಿಗಳ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!