ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ.08 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ನದಿ ಸ್ವಚ್ಚತಾ ಅಭಿಯಾನ ನಡೆಯಿತು.
ಬೆಳಿಗ್ಗೆ 9:00 ಗಂಟೆಗೆ ಗಡಿಕಲ್ಲು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಶಿವರಾಮ ಮಾಸ್ತರ್ ಕುಂಞೇಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್, ಕೃಷಿ ಮೇಲ್ವಿಚಾರಕರಾದ ರಮೇಶ್, ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಾಧವ ಚಾಂತಾಳ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಥ್ ಯಳದಾಳು ಹಾಗೂ ಮೋಹಿನಿ ಕಟ್ಟ, ಕಲ್ಮಕಾರು ಒಕ್ಕೂಟದ ಅಧ್ಯಕ್ಷ ಪುಷ್ಪರಾಜ್ ಪಡ್ಪು, ಡ್ಯಾನಿ ಯಳದಾಳು, ಚಂದ್ರಶೇಖರ ಕೊಂದಾಳ, ದಿನೇಶ್ ಮಡ್ತಿಲ, ಜಯಪ್ರಕಾಶ್ ಪರಿಯಂಬಿ, ವೇದಾವತಿ ಮುಳ್ಳುಬಾಗಿಲು, ಹಾಲು ಸೊಸೈಟಿ ಕಾರ್ಯದರ್ಶಿಯಾದ ಸುರೇಶ್.ಪಿ.ಯಸ್, ಬಿ ಒಕ್ಕೂಟದ ಅಧ್ಯಕ್ಷರಾದ ಯಶೋಧ ಅಂಬೆಕಲ್ಲು, ಹೇಮಂತ್ ಚಾಳೆಪ್ಪಾಡಿ, ನಿಕಟಪೂರ್ವ ಅಧ್ಯಕ್ಷರಾದ ದೇವಕುಮಾರ್, ಸೇವಾಪ್ರತಿನಿಧಿಗಳಾದ ಸಾವಿತ್ರಿ, ಶೋಭಾ, ಪದ್ಮಾವತಿ, ಸುಶ್ಮಿತಾ ಸೇರಿದಂತೆ ಒಕ್ಕೂಟದ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಶಿವರಾಮ ಮಾಸ್ತರ್ ಕುಂಞೇಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಜನಾಧಿಕಾರಿಗಳಾದ ನಾಗೇಶ್ ತೆಂಗಿನಕಾಯಿ ಒಡೆದು ಶುಭ ಹಾರೈಸಿದರು.
ಬಾಲಸುಬ್ರಹ್ಮಣ್ಯ ಎಲ್ಲಪಡ್ಕ ಸ್ವಾಗತಿಸಿ, ಮಣಿಕಂಠ ಕಟ್ಟ ಧನ್ಯವಾದ ಸಮರ್ಪಿಸಿದರು. ಸತೀಶ್.ಟಿ.ಎನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯದಲ್ಲಿ 3 ವರ್ಷಗಳ ಕಾಲ ವಲಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿ ದೊಡ್ಡತೋಟಕ್ಕೆ ವರ್ಗಾವಣೆಗೊಂಡಿರುವ ಸೀತಾರಾಮ ಕಾನಾವು ಅವರನ್ನು ಅವರನ್ನು ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ನದಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಲಾಯಿತು. ನದಿ ಸ್ವಚ್ಛತೆಯು ಕಲ್ಮಕಾರು ರಬ್ಬರ್ ಎಸ್ಟೇಟ್ ನಿಂದ ಪ್ರಾರಂಭವಾಗಿ ಹರಿಹರ ಪಲ್ಲತ್ತಡ್ಕ ಗ್ರಾಮದ ಗಡಿಯವರೆಗೆ ಸುಮಾರು 20 ಕಿಲೋಮೀಟರ್ ನದಿ ಸ್ವಚ್ಛತಾ ಕಾರ್ಯ ನಡೆಯಿತು.
ಈ ನದಿ ಸ್ವಚ್ಛತಾ ಅಭಿಯಾನದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ಹಾಗೂ ಒಕ್ಕೂಟದ ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳ ಸದಸ್ಯರುಗಳು, ಗ್ರಾಮಸ್ಥರು ಸೇರಿದಂತೆ ಮುಂತಾದವರು ಭಾಗಿಯಾದರು.
ವರದಿ :- ಉಲ್ಲಾಸ್ ಕಜ್ಜೋಡಿ