Ad Widget

ಸೇವಾಜೆ: ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರಿಂದ ಶ್ರಮದಾನ

ಸ ಕಿ ಪ್ರಾ ಶಾಲೆ ಸೇವಾಜೆಯಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರ ಸಹಕಾರದೊಂದಿಗೆ ಮೇ.07ರಂದು ಶ್ರಮದಾನ ನಡೆಯಿತು. ಶಾಲಾ ಆವರಣ ಗೋಡೆಗೆ ಅವಶ್ಯವಾಗಿರುವ ಮಣ್ಣನ್ನು ಸತತ ಮೂರನೇ ಬಾರಿ ಹೊತ್ತು ಸಮತಟ್ಟು ಮಾಡಿ ಶ್ರಮದಾನದ ಮೂಲಕ ಸಹಕರಿಸಿ ಶಾಲೆ ಹಾಗೂ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯದಲ್ಲೂ ಶ್ರಮದಾನದ ಮೂಲಕ ಸಹಕರಿಸಿರುತ್ತಾರೆ.

. . . . . . . . .

ಶಾಲೆಯ ಕುಂದು ಕೊರತೆಗಳಿಗೆ ನಿರಂತರವಾಗಿ ಸಹಕರಿಸುದಲ್ಲದೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲು ಮುಂಚೂಣಿಯಲ್ಲಿರುತ್ತಾರೆ. ಇಂತಹ ಕಾರ್ಯವು ಶಾಲೆ ಹಾಗೂ ಸಮುದಾಯದ ಬಾಂದವ್ಯವನ್ನು ಬಲಗೊಳಿಸುತ್ತವೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನಿರಂತರವಾಗಿ ಸಹಕರಿಸುತ್ತಿರುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರಿಗೆ ಶಾಲಾ ಮುಖ್ಯಗುರುಗಳು, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಪೋಷಕರ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading