- Wednesday
- April 2nd, 2025

ಸಮಾಜ ಕಟ್ಟಿದವರು, ಸಮಾಜಕ್ಕೆ ಬೆಳಕಾದವರನ್ನು ಸಮಾಜ ಎಂದೂ ನೆನಪಿಸುತ್ತದೆ. ಅದರಂತೆ ಆದರ್ಶ ಪುರುಷರ ಪುತ್ಥಳಿ ನಿರ್ಮಾಣವಾಗಿದೆ. ಆದರ್ಶ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದ, ಹೊಸ ತಲೆಮಾರಿಗೆ ಪ್ರೇರಣೆಯಾದ ದಿ. ಎನ್.ಎಂ.ಬಾಲಕೃಷ್ಣ ಗೌಡ ಅವರು ಸದಾ ಸ್ಮರಣೀಯರು ಇವರ ಮಾರ್ಗದರ್ಶನದಂತೆ ಯುವ ಜನತೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಐವರ್ನಾಡಿನ...

ಸ ಕಿ ಪ್ರಾ ಶಾಲೆ ಸೇವಾಜೆಯಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇವರ ಸಹಕಾರದೊಂದಿಗೆ ಮೇ.07ರಂದು ಶ್ರಮದಾನ ನಡೆಯಿತು. ಶಾಲಾ ಆವರಣ ಗೋಡೆಗೆ ಅವಶ್ಯವಾಗಿರುವ ಮಣ್ಣನ್ನು ಸತತ ಮೂರನೇ ಬಾರಿ ಹೊತ್ತು ಸಮತಟ್ಟು ಮಾಡಿ ಶ್ರಮದಾನದ ಮೂಲಕ ಸಹಕರಿಸಿ ಶಾಲೆ ಹಾಗೂ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯದಲ್ಲೂ ಶ್ರಮದಾನದ ಮೂಲಕ ಸಹಕರಿಸಿರುತ್ತಾರೆ....

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಜನರ ಕುಂದು-ಕೊರತೆಗಳನ್ನು ಈಡೇರಿಸುವ ಸಲುವಾಗಿ ಜನಸ್ಪಂದನ ಕಾರ್ಯಕ್ರಮ ಮೇ.06ರಂದು ಜರುಗಿತು. ಈ ಸಂದರ್ಭದಲ್ಲಿ ಜನರು ತಾಲೂಕು ಕಚೇರಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ತಿಳಿದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷರಾದ ಅಲೆಕ್ಸಾಂಡರ್ ಡಿಸೋಜ, ಸುಳ್ಯ ತಾಲೂಕು...