ನವ ಚೇತನ ಯುವಕ ಮಂಡಲ ಬೊಳುಬೈಲು ಇದರ ವಾರ್ಷಿಕ ಮಹಾಸಭೆ ಮತ್ತು 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೇ.3 ರಂದು ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಸುಧೀರ್ ನೆಕ್ರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯ ಪುರುಷೋತ್ತಮ ಕಿರ್ಲಾಯ, ಸ.ಕಿ.ಪ್ರಾ ಶಾಲೆ ಬೊಳುಬೈಲು ಇದರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಮ್ಮ, ಮತ್ತು ಸಹಶಿಕ್ಷಕಿ ಶ್ರೀಮತಿ ವಾಣಿ ಶುಭ ಹಾರೈಸಿದರು.
ನೂತನ ಅಧ್ಯಕ್ಷ ಶಶಿ ಪ್ರಸಾದ್ ಕಾಟೂರು, ಕಾರ್ಯದರ್ಶಿ ನಿತಿನ್ ಅರ್ಭಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಗಣೇಶ್ ಕಾಟೂರು 2021-22ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಪದ್ಮನಾಭ ನೆಕ್ರಾಜೆ ಲೆಕ್ಕ ಪತ್ರ ಮಂಡನೆ ಮಾಡಿದರು. ಧರ್ಮೇಶ್ ಕಾಯರಡ್ಕ ಸ್ವಾಗತಿಸಿ, ವೆಂಕಟೇಶ್ ನಡುಬೆಟ್ಟು ವಂದಿಸಿದರು. ಪ್ರವೀಣ ಕಾಟೂರು ಕಾರ್ಯಕ್ರಮ ನಿರೂಪಿಸಿದರು.
2022-23ನೇ ಸಾಲಿನ ಅಧ್ಯಕ್ಷರಾಗಿ ಶಶಿಪ್ರಸಾದ್ ಕಾಟೂರು, ಉಪಾಧ್ಯಕ್ಷರಾಗಿ ಧರ್ಮೇಶ್ ಕಾಯರಡ್ಕ, ವೆಂಕಟೇಶ್ ನಡುಬೆಟ್ಟು, ಕಾರ್ಯದರ್ಶಿಯಾಗಿ ನಿತಿನ್‌ಕುಮಾರ್ ಅರ್ಭಡ್ಕ, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಕಾಟೂರು, ಖಜಾಂಜಿಯಾಗಿ ಪದ್ಮನಾಭ ನೆಕ್ರಾಜೆ, ಸಂಘಟನಾ ಕಾರ್ಯದರ್ಶಿ : ಗಣೇಶ್ ಕಾಟೂರು, ಸಹಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಕುಂಭರ್ಚೊಡು, ಕ್ರೀಡಾ ಸಂಚಾಲಕರಾಗಿ ಚಂದ್ರಶೇಖರ ನೆಕ್ರಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಚಿತ್ತರಂಜನ್ ಕಾಟೂರು, ಕ್ರೀಡಾ ಜತೆ ಕಾರ್ಯದರ್ಶಿಯಾಗಿ ನಿತಿನ್ ಅರ್ಭಡ್ಕ, ಸಾಂಸ್ಕೃತಿಕ ಸಂಚಾಲಕರಾಗಿ ಪ್ರಸಾದ್ ಕುಂಭರ್ಚೋಡು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಆರ್ತಾಜೆ, ಮಾಧ್ಯಮ ವರದಿಗಾರರಾಗಿ ಶಿವಪ್ರಸಾದ್ ಪಿಲಿಕೋಡಿ ಹಾಗೂ ನಿರ್ದೇಶಕರಾಗಿ ಚೇತನ್ ಅರ್ಭಡ್ಕ, ಪ್ರದೀಪ್ ಅರ್ಭಡ್ಕ, ಸಚಿನ್ ರೈ ಕುಕ್ಕಂದೂರು, ನಿತಿನ್ ಕಾಟೂರು, ಹವ್ಯಾಸ್ ಕಾಟೂರು, ಪ್ರವೀಣ್ ಹುಲಿಮನೆ, ಪ್ರಣಮ್ ಶೆಟ್ಟಿ,ಭುವನೇಂದ್ರ ಬೊಳುಬೈಲು, ಸುಧೀರ್ ನೆಕ್ರಾಜೆ, ಜಯಂತ್ ಕುಂಭರ್ಚೊಡು, ಅಭಿಷೇಕ್ ಬೊಳುಬೈಲು, ದೀಪಕ್ ಕಾಯರಡ್ಕ, ಗೌರವ ಸಲಹೆಗಾರರಾಗಿ ಕುಸುಮಾಧರ ಅರ್ಭಡ್ಕ, ಪದ್ಮನಾಭ ಬೊಳುಬೈಲು, ದಯಾನಂದ ಪಿಲಿಕೋಡಿ, ಗಣೇಶ್ ರೈ ಕುಕ್ಕಂದೂರು, ರಾಘವ ಅರ್ಭಡ್ಕ, ಜನಾರ್ಧನ ಕುಂಭರ್ಚೋಡು, ವೆಂಕಪ್ಪ ನೆಕ್ರಾಜೆ, ಜಯಪ್ರಕಾಶ್ ನೆಕ್ರಾಜೆ, ಜಯಪ್ರಕಾಶ್ ಬೈತಡ್ಕ, ಹೇಮಕರ ನೆಕ್ರಾಜೆ, ವಾಸುದೇವ ಎ. ಕೆ. ಅರ್ಭಡ್ಕ, ವಿಶ್ವನಾಥ ನಾಯ್ಕ ಅರ್ಭಡ್ಕ ಆಯ್ಕೆಯಾದರು.