- Friday
- November 22nd, 2024
ಅಖಿಲ ಭಾರತೀಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಿಷತ್ ಮತ್ತು ಪ್ರಗತಿಶೀಲ ಪ್ರಕಾಶನವು ಮೈಸೂರು ದಸರಾದ ಅಂಗವಾಗಿ ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಲೀಲಾಕುಮಾರಿ ತೊಡಿಕಾನರ ಕವನವು ಅತ್ಯುತ್ತಮ ಕವನವೆಂದು ಆಯ್ಕೆಯಾಗಿದ್ದು, ದಸರಾ ಕಾವ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಎ. ೧೭ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ದಸರ ಕಾವ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು.ನಂತರ ನಡೆದ ಕವಿಗೋಷ್ಟಿಯಲ್ಲಿ ವಿಜೇತ...
ಸುಳ್ಯದ ಗಾಂಧಿನಗರದ ಮುಖ್ಯರಸ್ತೆಯಲ್ಲಿ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯುವಕನೋರ್ವ ಯತ್ನಿಸಿದ ಘಟನೆ ಇಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಆತನನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಆತನನ್ನು ಉತ್ತರ ಕರ್ನಾಟಕ ಕೂಲಿ ಕಾರ್ಮಿಕ ಮಂಜುನಾಥ್ ಎಂದು ಗುರುತಿಸಲಾಗಿದೆ.
ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ "ಶೀಲ ಮತ್ತು ಶಿಸ್ತಿ"ನ ತಳಹದಿಯಲ್ಲಿ ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸುಳ್ಯ ತಾಲೂಕಿನ ಅರಂತೋಡು ಹಾಗೂ ತೊಡಿಕಾನ ಗ್ರಾಮಗಳಲ್ಲಿ "ಲಂಚಮುಕ್ತ ಅಭಿಯಾನ" ಕಾರ್ಯಕ್ರಮವನ್ನು ಏ.19ರಂದು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 6.00 ಗಂಟೆಯ ತನಕ ಹಮ್ಮಿಕೊಳ್ಳಲಾಯಿತು. ಈ ಅಭಿಯಾನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದಕ್ಷಿಣ ಕನ್ನಡ...
ನಾಲ್ಕೂರು ಒಕ್ಕೂಟದ ವತಿಯಿಂದ ಗುತ್ತಿಗಾರು ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ಗುಂಡ್ಲುಪೇಟೆ ಗೆ ವರ್ಗಾವಣೆ ಗೊಂಡಿರುವ ಮುರಳೀಧರ ರವರ ಬೀಳ್ಕೊಡುಗೆ ಸಮಾರಂಭ ನಡುಗಲ್ಲು ಶಾಲೆಯಲ್ಲಿ ಏ.18 ರಂದು ನಡೆಯಿತು. ತಾಲೂಕು ಜನಜಾಗೃತಿ ಸದಸ್ಯ ವಿಜಯಕುಮಾರ್ ಚಾರ್ಮಾತ ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು. ಒಕ್ಕೂಟದ ಅಧ್ಯಕ್ಷರಾದ ಶಾಂತಪ್ಪ ಉತ್ರಂಬೆ, ಸತೀಶ್ ಬೊಂಬುಳಿ, ಗ್ರಾ.ಪ. ಸದಸ್ಯ ಹರೀಶ್ ಕೊಯಿಲ, ಶಾಲಾ...
ಅರಂತೋಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜನ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ತೆಕ್ಕಿಲ್ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ತೆಕ್ಕಿಲ್ ಸಮುದಾಯ ಭವನ ಆರಂತೋಡು ನಲ್ಲಿ ನಡೆಯಿತು. ನೂತನ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಪಂಚಾಯತ್ ಸದಸ್ಯರು ಎದುರಿಸುತ್ತಿರುವ ಸಮಸ್ಯೆ,...
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರವಣದೋಷ ತಪಾಸಣಾ ಶಿಬಿರವು ಏ.22ರಂದು ನಡೆಯಲಿದೆ. ಶಿಬಿರವು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರ ತನಕ ಜರುಗಲಿದ್ದು, 5 ವರ್ಷ ಮೇಲ್ಪಟ್ಟ ಶ್ರವಣದೋಷ ಇರುವವರು ಈ ಶಿಬಿರಕ್ಕೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಚಿಣ್ಣರಮೇಳ 2022 ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರವು ಮಕ್ಕಳ ಸಾಂಸ್ಕೃತಿಕ ಸಂಭ್ರಮದೊಂದಿಗೆ ತೆರೆ ಕಂಡಿತು. ಸಮಾರೋಪ ಭಾಷಣ ಮಾಡಿದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ.ವಿ.ಸೂರ್ಯನಾರಾಯಣ ಇವರು ಮಾತಾನಾಡಿ" ಮಕ್ಕಳ ಶೈಕ್ಷಣಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಇಂತಹ ಬೇಸಿಗೆ ಶಿಬಿರಗಳು ಬಹುಮುಖ್ಯ...
ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಬೈದು ನಿಂದಿಸಿದ್ದಾರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಸಾಯಿ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್...
ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ "ಸಾಧನೆಯ ಸಂಭ್ರಮ", ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ "ಮುಖ್ಯಮಂತ್ರಿ" ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಸಂಜೆ ಗಂಟೆ 5.00ಕ್ಕೆ ಜರುಗಲಿದೆ. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಭಾಸ್ಕರ್ ರಾವ್ ಹಾಗೂ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ...
ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ. 26ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಜರಗಲಿರುವುದು. ಏ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ನ ಶ್ರೀದೇವರಿಗೆ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ....
Loading posts...
All posts loaded
No more posts