Ad Widget

ಸುಳ್ಯ: ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಭರದ ಸಿದ್ಧತೆ – ಸುಸಜ್ಜಿತ ಗ್ಯಾಲರಿಯಲ್ಲಿ ವೀಕ್ಷಿಸಲು ಅವಕಾಶ

ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ಮೇ.4 ರಿಂದ ಆರಂಭಗೊಂಡು ಮೇ.8ರವರೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 13 ವರ್ಷಗಳ ಬಳಿಕ ಈ ಪಂದ್ಯಾವಳಿ ನಡೆಯುತ್ತಿದೆ. ಈಗಾಗಲೇ ಮೈದಾನ ಸಜ್ಜುಗೊಂಡಿದ್ದು ಗ್ಯಾಲರಿ ಕೆಲಸ ನಡೆಯುತ್ತಿದೆ. ಪುರುಷರ 6 ಹಾಗೂ ಮಹಿಳೆಯರ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಸುಸಜ್ಜಿತವಾದ ಬೃಹತ್ ಗ್ಯಾಲರಿ ನಿರ್ಮಾಣಗೊಳ್ಳುತ್ತಿದೆ...

ಬಳ್ಪ: ಮದರಂಗಿ ಕಾರ್ಯಕ್ರಮದಲ್ಲಿ ಭಜನೆ

ಬಳ್ಪ ಗ್ರಾಮದ ಕೊರಪ್ಪಣೆ ಸತೀಶ್ ಪೂಜಾರಿಯವರ ಮದುವೆಯ ಪ್ರಯುಕ್ತ ನಡೆದ ಮದರಂಗಿ ಶಾಸ್ತ್ರ ಕಾರ್ಯಕ್ರಮದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮದರಂಗಿ ಶಾಸ್ತ್ರ ಮುಗಿದ ನಂತರ ಸಂಜೆ ಸ್ಥಳೀಯ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿತು.
Ad Widget

ಪ್ರತಿಯೊಬ್ಬರ ಹೃದಯದಲ್ಲಿ ಧರ್ಮದ ಪ್ರತಿಷ್ಟಾಪನೆ ಆಗಬೇಕಿದೆ: ನಳಿನಿ ಆಚಾರ್ಯ

ಮರಕತ ಶ್ರೀ ದುರ್ಗಾಪರಮೇಶ್ವರಿ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ ಪ್ರತಿಯೊಬ್ಬರ ಹೃದಯದಲ್ಲಿ ಧರ್ಮದ ಪ್ರತಿಷ್ಠಾಪನೆ ಆಗಬೇಕಾಗಿದೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧಾರ್ಮಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ನಳಿನಾಕ್ಷಿ ಆಚಾರ್ಯ ಅವರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಏ. 23 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ...

ನಿನಾದ ತಂಟೆಪ್ಪಾಡಿಯಲ್ಲಿ “ಕೋವಿಡ್ ಕಥೆಗಳು” ಪುಸ್ತಕ ಬಿಡುಗಡೆ

ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ "ನಿನಾದ" ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ವಿರಚಿತ "ಕೋವಿಡ್ ಕಥೆಗಳು" ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರರವರು ಸಾಂಕೇತಿಕವಾಗಿ ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಇಂದಾಜೆ, ಸಂಘದ ಪ್ರಧಾನಕಾರ್ಯದರ್ಶಿ...

ಶುಭವಿವಾಹ: ಮಹೇಶ್- ಶ್ರುತಿ

ದೇವಚಳ್ಳ‌ ಗ್ರಾಮದ ಎಲಿಮಲೆಯಲ್ಲಿರುವ ಕೋಲ್ಚಾರ್ ದಿ. ಚಿನ್ನಪ್ಪ ಗೌಡರ ಪುತ್ರ ಮಹೇಶ್ ರವರ ವಿವಾಹವು ಕಾಸರಗೋಡು ತಾ. ದೇಲಂಪಾಡಿ ಗ್ರಾಮದ ವಾಲ್ತಾಜೆ ಮನೆ ಪದ್ಮಯ್ಯ ಗೌಡರ ಪುತ್ರಿ ಶ್ರುತಿಯವರೊಂದಿಗೆ ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಎ.24ರಂದು ನಡೆಯಿತು.

ನಿನಾದ ತಂಟೆಪ್ಪಾಡಿಯಲ್ಲಿ “ಸಾಧನೆಯ ಸಂಭ್ರಮ”; ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ “ಮುಖ್ಯಮಂತ್ರಿ” ನಾಟಕ ಪ್ರದರ್ಶನ

ಕಳಂಜ ಗ್ರಾಮದ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ "ಸಾಧನೆಯ ಸಂಭ್ರಮ", ಸಾಧಕರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಹಾಗೂ "ಮುಖ್ಯಮಂತ್ರಿ" ನಾಟಕ ಪ್ರದರ್ಶನ ಏ.24 ಆದಿತ್ಯವಾರದಂದು ಜರುಗಿತು. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜನಪ್ರಿಯ ಚಲನಚಿತ್ರ, ಧಾರಾವಾಹಿ ಮತ್ತು ರಂಗಭೂಮಿ ನಟರಾದ ಶ್ರೀ ಮುಖ್ಯಮಂತ್ರಿ ಚಂದ್ರು ಹಾಗೂ ಡಾ.ಬಿ.ವಿ.ರಾಜಾರಾಂ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನದ ಅಂಗವಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ...

ಕಂದಡ್ಕದಲ್ಲಿ ಸೇತುವೆಗೆ ಗುದ್ದಿ ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು

ಎ. ೭ ರಂದು ಸುಳ್ಯದಿಂದ ಮಡಪ್ಪಾಡಿ ಕಡೆಗೆ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಕಂದಡ್ಕ ಸೇತುವೆಗೆ ಬೈಕ್ ಡಿಕ್ಕಿಯಾಗಿ ಕೈ ಮತ್ತು ತಲೆಗೆ ಗಂಭೀರ ಗಾಯಗೊಂಡು ಎ.೨೪ ರಂದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವುದಾಗಿ ತಿಳಿದು ಬಂದಿದೆ .ಮೃತಪಟ್ಟ ಯುವಕನನ್ನು ಪೆರಾಜೆ ಗ್ರಾಮದ ನಿಡ್ಯಮಲೆ ಜಯರಾಮ ಎಂಬವರ ಪುತ್ರ ಸಿನಾತ್ (೨೫)...

ದೈವಾರಾಧನೆಯಲ್ಲಿ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆ ಸಾಕಾರ : ಎಡನೀರು ಶ್ರೀ – ಕುಕ್ಕುಜಡ್ಕ ವಿಷ್ಣುಮೂರ್ತಿ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶಾಭಿಷೇಕ

ಕುಕ್ಕುಜಡ್ಕ: ಎಲ್ಲರೂ ಒಟ್ಟಾಗಿ ಸೇರಿ ಮಾಡುವ ದೈವಾರಾಧನೆಯಲ್ಲಿ ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಇದರಿಂದ ಹಿಂದೂ ಧರ್ಮದ ಉನ್ನತಿ ಸಾಧ್ಯ ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮದ ಅಂಗವಾಗಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಗಿರೀಶ್ ನಂದನ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ವರ್ಗಾವಣೆಗೆ ಆದೇಶವಾಗಿದೆ. ಅವರು ಬೆಳಗಾವಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಆದೇಶವಾಗಿದೆ ಎಂದು ತಿಳಿದು ಬಂದಿದೆ.

ಕಸಾಪ ಮಂಗಳೂರು ತಾಲೂಕು ಘಟಕದಿಂದ ಟಿ ಜಿ.ಮೂಡೂರ್ ರವರಿಗೆ ಶ್ರದ್ಧಾಂಜಲಿ

ವಯೋಸಹಜ ಅನಾರೋಗ್ಯದಿಂದ ನಿಧನರಾದ ಹಿರಿಯ ಸಾಹಿತಿ ಟಿ ಜಿ ಮೂಡೂರ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ನಂತೂರಿನ ಭಾರತಿ ಕಾಲೇಜಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀ ವಸಂತ ಕುಮಾರ್ ಪೆರ್ಲರವರು ಮಾತನಾಡಿ ಟಿ...
Loading posts...

All posts loaded

No more posts

error: Content is protected !!