Ad Widget

ಸುಳ್ಯ: ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಭರದ ಸಿದ್ಧತೆ – ಸುಸಜ್ಜಿತ ಗ್ಯಾಲರಿಯಲ್ಲಿ ವೀಕ್ಷಿಸಲು ಅವಕಾಶ

ಸುಳ್ಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ಮೇ.4 ರಿಂದ ಆರಂಭಗೊಂಡು ಮೇ.8ರವರೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಸುಮಾರು 13 ವರ್ಷಗಳ ಬಳಿಕ ಈ ಪಂದ್ಯಾವಳಿ ನಡೆಯುತ್ತಿದೆ.

ಈಗಾಗಲೇ ಮೈದಾನ ಸಜ್ಜುಗೊಂಡಿದ್ದು ಗ್ಯಾಲರಿ ಕೆಲಸ ನಡೆಯುತ್ತಿದೆ. ಪುರುಷರ 6 ಹಾಗೂ ಮಹಿಳೆಯರ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ಸುಸಜ್ಜಿತವಾದ ಬೃಹತ್ ಗ್ಯಾಲರಿ ನಿರ್ಮಾಣಗೊಳ್ಳುತ್ತಿದೆ ಎಂದು ವಾಲಿಬಾಲ್ ರಾಷ್ಟ್ರೀಯ ಪಂದ್ಯಾಟ ಆಯೋಜನೆಯ ಸಂಘಟಕಾರದ ಎನ್.ಜಯಪ್ರಕಾಶ್ ರೈ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!