Ad Widget

ಮುಖ್ಯಮಂತ್ರಿಗಳಿಂದ ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ಸೀತಾರಾಮ ರೈ ಸವಣೂರು

ಬೆಂಗಳೂರು : ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿಂದು ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಹಕಾರಿ ಹಾಗೂ ಸಾಮಾಜಿಕ ಧುರೀಣ, ವಿದ್ಯಾದಾನಿ ಸವಣೂರು ಸೀತಾರಾಮ ರೈ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ, ಗೃಹ‌ಸಚಿವ...

ಮಾವಿನಕಟ್ಟೆ : ಸ್ವಚ್ಛತಾ ಕಾರ್ಯಕ್ರಮ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ನೇಮೋತ್ಸವ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು ದೈವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು. ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘದ ಸದಸ್ಯರಿಂದ ಶ್ರಮದಾನ ನೆರವೇರಿತು.
Ad Widget

ಮಡಂತ್ಯಾರು : ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಶಾಖೆ ಉದ್ಘಾಟನೆ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಇಂದು ಉದ್ಘಾಟನೆಗೊಂಡಿತು. ಶಾಸಕ ಹರೀಶ್ ಪೂಂಜರವರು ನೂತನ  ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಥಮ ಠೇವಣಿ ಪತ್ರವನ್ನು ಮಡಂತ್ಯಾರು ಸಿ.ಎ ಬ್ಯಾಂಕ್‌  ಅಧ್ಯಕ್ಷ ಕೆ.ಅರವಿಂದ್ ಜೈನ್ , ಪ್ರಥಮ ಪಾಲು ಪತ್ರ ವಿತರಣೆಯನ್ನು ಶ್ರೀ...

ರಾಷ್ಟ್ರಮಟ್ಟದ ಪ್ರೈಡ್ ಆಫ್ ಇಂಡಿಯಾ ಅವಾರ್ಡ್ ಗೆ ಡಾ ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರು, ವಲಯ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ನವದೆಹಲಿಯ ಅಚೀವರ್ಸ್ ಅಸೋಸಿಯೇಷನ್ ಫಾರ್ ಹೆಲ್ತ್ ಅಂಡ್ ಎಜ್ಯುಕೇಷನ್ ಗ್ರೋತ್ ಸಂಸ್ಥೆಯವರು ಪ್ರತೀವರ್ಷ ಕೊಡಮಾಡುವ ಪ್ರೈಡ್ ಆಫ್ ಇಂಡಿಯಾ ಅವಾರ್ಡ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ 2022 ನೇ ಸಾಲಿನ‌ ಈ...

ಗುತ್ತಿಗಾರು : ಪ್ರಸಾದ್ ರೆಸ್ಟೋರೆಂಟ್ & ಲಾಡ್ಜಿಂಗ್ ಶುಭಾರಂಭ – ಸಚಿವ ಎಸ್. ಅಂಗಾರರಿಂದ ಉದ್ಘಾಟನೆ

ಗುತ್ತಿಗಾರಿನ ಹೃದಯಭಾಗದಲ್ಲಿರುವ ದೇವಿಪ್ರಸಾದ್ ಚಿಕ್ಮುಳಿ ಮಾಲಕತ್ವದ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಪ್ರಸಾದ್ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಮಾ.20 ರಂದು ಶುಭಾರಂಭಗೊಂಡಿತು. ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಚಿವರಾದ ಎಸ್.ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ...

ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿ

ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಿತು. ಮಾ.19 ರಂದು ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯಲಾಯಿತು. ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಿತು. ಮಾ.20 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ...

ಹರಿಹರ ಪಲ್ಲತ್ತಡ್ಕ : ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಹರಿಹರ ಪಲ್ಲತ್ತಡ್ಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಾ.19 ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ರಾಮಚಂದ್ರ ಕಜ್ಜೋಡಿ, ಕೃಪಾ.ಪಿ.ಎಸ್, ಮೇದಪ್ಪ.ಎ, ವೆಂಕಟೇಶ್ ನಾಯಕ್, ವನಿತಾ.ಜಿ, ವೀಣಾ.ಕೆ, ರಶ್ಮಿ ಕಜ್ಜೋಡಿ, ಜಯಶ್ರೀ, ಸೌಮ್ಯ.ಕೆ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.8ನೇ ತರಗತಿಯ ವಿದ್ಯಾರ್ಥಿ ಭುವನೇಶ್ವರ ಸ್ವಾಗತಿಸಿ ಧನ್ಯವಾದ...

ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಸುಬ್ರಹ್ಮಣ್ಯದ ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ ಮಹೇಶ ಮುನಿಯಂಗಳ ಅವರಿಗೆ ಮಾ.19 ರಂದು ತಮಿಳುನಾಡಿನ ಹೊಸೋರು ನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಹ ಕಾಸರಗೋಡು ಕಾನತ್ತೂರಿನ...

ಮಾ.21 : ಸುಳ್ಯದಲ್ಲಿ ಅಮ್ ಆದ್ಮಿ ಪಾರ್ಟಿ ವತಿಯಿಂದ ಸಾರ್ವಜನಿಕ ಕಾರ್ಯಕ್ರಮ

ಸುಳ್ಯದಲ್ಲಿ ವಿಧಾನಸಭಾ ಕ್ಷೇತ್ರದ ಅಮ್ ಆದ್ಮಿ ಪಾರ್ಟಿ ವತಿಯಿಂದ ಪಂಜಾಬ್ ಜನತೆಗೆ ಅಭಿನಂದನೆ ಮತ್ತು ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆಯು ಮಾ.21 ರಂದು ನಡೆಯಲಿದೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕ ಅಶೋಕ್ ಎಡಮಲೆ ಹೇಳಿದರು.ಅವರು ಮಾ.19 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಕಾನತ್ತಿಲ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ...

ಅರಂತೋಡು : ಕಾರು ಪಲ್ಟಿ – ಪ್ರಯಾಣಿಕರು ಅಪಾಯದಿಂದ ಪಾರು

ಆರಂತೋಡು ಸಮೀಪ ಕುಲ್ಚಾರ್ ತಿರುವಿನಲ್ಲಿ ರಿಡ್ಸ್ ಕಾರೊಂದು ಮಗುಚಿ ಬಿದ್ದ ಘಟನೆ ಇಂದು ನಡೆದಿದೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಕಾರ್ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!