ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆಯು ಪೆರುವಾಜೆ ಜೆ. ಡಿ. ಆಡಿಟೋರಿಯಂ ನಲ್ಲಿ ನಡೆಯಿತು.
ವಿಶೇಷ ಕಾರ್ಯಕಾರಿಣಿ ಯ ಉದ್ಘಾಟನೆಯನ್ನು
ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿ ಮಾತನಾಡಿದರು. ವಿನಯ ಕುಮಾರ್ ಮಾತನಾಡಿ ಪಕ್ಷ ಸಂಘಟ ಹಾಗೂ ನಮ್ಮ ಜೀವನದ ವಿಚಾರ ದಾರೆ ಬಗ್ಗೆ ಮಾತನಾಡಿದರು.ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಸುಳ್ಯ ಮಂಡಲ ಪ್ರಭಾರಿ ಹಾಗೂ ಜಿಲ್ಲಾ ಉಪಾಧ್ಯ ಪ್ರಭಾರಿ ಬುಡಿಯರ್ ರಾಧಾಕೃಷ್ಣ ರೈ, ಸುಳ್ಯ ಮಂಡಲ ಪ್ರಭಾರಿ ರಾಮ್ ದಾಸ್ ಬಂಟ್ವಾಳ್ , ರಾಜ್ಯ, ಜಿಲ್ಲಾ ,ಮಂಡಲ ಪ್ರಭಾರಿಗರು , ಶಕ್ತಿ ಕೇಂದ್ರದ ಪದಾಧಿಕಾರಿಗಳು , ಪ್ರಮುಖರು ಉಪಸ್ಥಿತರಿದ್ದರು.
ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ರವರು ಸ್ವಾಗತಿಸಿ, ಇಂದಿರಾ ರವರು ವಂದಿಸಿದರು.
ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
- Tuesday
- February 4th, 2025