Ad Widget

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು : ಡಾ| ಚೂಂತಾರು – ಮಹಿಳಾ ದಿನಾಚರಣೆ ಅಂಗವಾಗಿ ಗೃಹರಕ್ಷಕಿ ರಮ್ಯರಿಗೆ ಸನ್ಮಾನ

   ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದ ಮಹಿಳಾ ಗೃಹರಕ್ಷಕಿ ರಮ್ಯರಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ ಮಾ.27 ರಂದು ನಡೆಯಿತು. ಇವರು ಪ್ರಸ್ತುತ  ಸುಳ್ಯ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಕೋವಿಡ್ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಫಲಪುಷ್ಪ ನೀಡಿ, ಶಾಲುಹೊದಿಸಿ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಇವರು, ಮಹಿಳೆಯರು ಅಮ್ಮನಾಗಿ, ಸಹೋದರಿಯಾಗಿ, ಸೊಸೆಯಾಗಿ, ಪತ್ನಿಯಾಗಿ, ಮಗಳಾಗಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆಯರು ಕೇವಲ ಮನೆಯಲ್ಲಿ ಮಾತ್ರವಲ್ಲದೆ ಹೊರಗೆಯೂ ದುಡಿಯುತ್ತಾರೆ ಮತ್ತು ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು. ಆದ್ದರಿಂದ ಮಹಿಳೆಯರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿದೆ, ಮಹಿಳೆಯರನ್ನು ಗೌರವಿಸುವುದು  ಭಾರತೀಯ ಸಂಸ್ಕೃತಿ ಹಾಗೂ ಪ್ರತಿಯೊಬ್ಬ ಪುರುಷರ ಕರ್ತವ್ಯ ಎಂದು ನುಡಿದರು. ಈ ಸಮಾರಂಭವು ಸುಳ್ಯ ಗೃಹರಕ್ಷಕ ಕಛೇರಿಯಲ್ಲಿ ನಡೆಯಿತು.  ಈ ಸಂದರ್ಭದಲ್ಲಿ  ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಬನ್ನಂಜೆ ಹಿರಿಯ ಗೃಹರಕ್ಷಕಿಯರಾದ ಪುಷ್ಪ, ಪೂರ್ಣಿಮಾ, ಪುಷ್ಪಾವತಿ, ಗೀತಾ, ಶ್ರುತಿ , ಶುಭ ಲಕ್ಷ್ಮಿ, ರೇವತಿ ಹಿರಿಯ ಗೃಹರಕ್ಷಕರಾದ ಸೋಮನಾಥ್, ಪ್ರಭಾಕರ್ ಕಾಮತ್,ಗಿರಿಧರ್, ರಾಜೇಶ್, ಅಬ್ದುಲ್ ರಜಾಕ್, ಲೋಕನಾಥ ಮುಂತಾದವರು ಉಪಸ್ಥಿತರಿದ್ದರು.

Discover more from ಅಮರ ಸುದ್ದಿ

Subscribe to get the latest posts sent to your email.

. . . . . . . . .

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading