
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಡಿಸೆಂಬರ್ 2021 ರಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಯಶಸ್ವಿ ಪಿ.ಭಟ್ ಶೇ.83.5 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಈಕೆ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಅವರ ಶಿಷ್ಯೆ. ಸುಳ್ಯ ದೇವಸ್ಯ ನಿವಾಸಿ ಪ್ರಶಾಂತ್ ಭಟ್ ಮತ್ತು ಶ್ರೀಮತಿ ಪ್ರೇಮಾ ದಂಪತಿಯ ಪುತ್ರಿ. ಇವರು ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ.