
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ವಂಶಿಕಾ ಎಸ್ ರವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಾಗಿರುತ್ತಾರೆ. ಐವರ್ನಾಡು ಗ್ರಾಮದ ಪರ್ಲಿಕಜೆಯ ಸದಾನಂದ ವಿ ಹಾಗೂ ಶ್ರೀಮತಿ ಪರಿಮಳ ದಂಪತಿಗಳ ಪುತ್ರಿ. ಪ್ರಸ್ತುತ ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ ಇಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.