
ಸುಳ್ಯ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ವಕೀಲ ನಾರಾಯಣ ಕೆ. ಅವರನ್ನು ಹಾಗು ನೂತನ ಪದಾಧಿಕಾರಿಗಳನ್ನು ಬಿಜೆಪಿ ಮಂಡಲ ಸಮಿತಿ ವತಿಯಂದ ಅಭಿನಂದಿಸಲಾಯಿತು. ಬಿಜೆಪಿ
ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗು ಬಿಜೆಪಿ ಯುವ ಮೋರ್ಚಾ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಸುಳ್ಯ ಬಾರ್ ಅಸೋಸಿಯೇಷನ್‌ಗೆ ಆಗಮಿಸಿ ಹಾರ ಹಾಕಿ ಅಭಿನಂದಿಸಿದರು. ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಕೋಶಾಧಿಕಾರಿ ಜಗದಿಶ್ ಡಿ.ಪಿ, ಗ್ರಂಥಾಲಯ ಕಾರ್ಯದರ್ಶಿ ಹರ್ಷಿತ್ ಕಾರ್ಜ ಅವರನ್ನು ಅಭಿನಂದಿಸಲಾಯಿತು. ವಕೀಲರಾದ ಸುಕುಮಾರ ಕೋಡ್ತುಗುಳಿ, ದಿಲೀಪ್ ಬಾಬ್ಲುಬೆಟ್ಟು, ಚಂದ್ರಶೇಖರ, ಸಂದೀಪ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.