ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕುಮಾರಿ ಅವನಿ ಮಾವಿನಕಟ್ಟೆ ಯವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಪ್ರಥಮವಾಗಿ ವಿದುಷಿ ಶ್ರೀಮತಿ ರಾಧಿಕಾ ಕಲ್ಲೂರಾಯ ಇವರಿಂದ ತರಬೇತಿ ಪಡೆದು ನಂತರ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ ರೈ ಮತ್ತು ವಿದುಷಿ ಸ್ವಸ್ತಿಕ ಆರ್.ಶೆಟ್ಟಿ ಇವರ ಶಿಷ್ಯೆಯಾಗಿರುತ್ತಾರೆ.
ಇವರು ದೇವಚಳ್ಳ ಗ್ರಾಮದ ರಾಜೇಶ್ ಮಾವಿನಕಟ್ಟೆ ಮತ್ತು ಶ್ರೀಮತಿ ವಂದನಾ ಮೂರ್ಜೆ ದಂಪತಿಗಳ ಪುತ್ರಿ. ಪ್ರಸ್ತುತ ಗುತ್ತಿಗಾರು ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ
- Tuesday
- December 3rd, 2024