ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲ, ಅಜ್ಜಾವರ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಶಂಕರ ಭಾರತೀ ವೇದ ಪಾಠಶಾಲೆ ಅಜ್ಜಾವರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಮಾರ್ಚ್ 13ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಷಮರ್ಧಿನಿ ದೇವಸ್ಥಾನ ಧರ್ಮದರ್ಶಿ ಭಾಸ್ಕರ ಬಯಂಬು ನೆರವೇರಿಸಿದರು.
ಅಜ್ಜಾವರ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೇಖಕಿ, ಸಾಹಿತಿ ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ , ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಡಾ. ಲೇಖಾ ವಿಕ್ರಂ ಅಡ್ಪಂಗಾಯ ಭಾಗವಹಿಸಿದ್ದರು.
ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಿಶಾಲಾಕ್ಷಿ, ಧನಲಕ್ಷ್ಮೀ ಮಹಿಳಾ ಗೌರವಾಧ್ಯಕ್ಷೆ ಶ್ವೇತಾ ಪುರುಷೋತ್ತಮ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ್, ಬೆಳ್ಯಪ್ಪ ಗೌಡ ಮುಡೂರು, ದಯಾಳ್ ಮೇದಿನಡ್ಕ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಸಿದ್ಧ ನಾಟಿವೈದ್ಯೆ ಶ್ರೀಮತಿ ಗಿರಿಜಾವತಿ ಪಡ್ದಂಬೈಲ್ ರವರನ್ನು ಸನ್ಮಾನಿಸಲಾಯಿತು. ವಿಮಲಾರುಣ ರವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಜಗತ್ ಪೌಂಡೇಷನ್ (ರಿ) ಸುಳ್ಯ ಇವರು ಮಹಿಳಾ ಮಂಡಲಕ್ಕೆ ಟೇಬಲ್ ಹಾಗೂ ಚಯರ್ ಗಳನ್ನು ನೀಡಿದರು. ಶ್ರೀಮತಿ ಮೋಹಿನಿ ಪ್ರಾರ್ಥಿಸಿದರು.
ವಿಶಾಲ ಕರ್ಲಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ನಾಗೇಶ್ ಸ್ವಾಗತಿಸಿದರು. ಕವಿತಾ ಪುರುಷೋತ್ತಮ ವಂದಿಸಿದರು.