ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 30 ನೇ ಸಮಾರಂಭ ಎಲಿಮಲೆ ಶಾಲೆಯಲ್ಲಿ ನಡೆಯಿತು. ಅಭಿಯಾನದ ಬಗ್ಗೆ ಸಂಘಟಕರಾದ ಉನೈಸ್ ಪೆರಾಜೆಯವರು ಮಾಹಿತಿಯನ್ನು ನೀಡಿದರು. ಎಲಿಮಲೆ ಶಾಲೆಗೆ ಸುನಿತಾ ಮಹೇಶ್ವರಿ, ಅರ್ಜುನ್ ಕಲ್ಯಾಣ್ ಪುರ ನೀಡಿದ ಜಾರುಬಂಡಿ ಮತ್ತು ಆಟೋಪ ಕರಣಗಳನ್ನು ದೇವಚಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಲೋಚನಾ ದೇವ ರವರು ಉದ್ಘಾಟಿಸಿದರು. ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಸ್ಮಾರ್ಟ್ ರೂಮ್ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ರಮಾನಂದ ಎಲಿಮಲೆ ಅಧ್ಯಕ್ಷತೆ ವಹಿಸಿದ್ದರು. ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾಮ ಪಂಚಾಯಿತಿ ಸದಸ್ಯ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯಿತಿ ಸದಸ್ಯ ವೇಣುಗೋಪಾಲ್, ದೇವಚಳ್ಳ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಲತಾ ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ,ಸುನಿತಾ, ಜೋಸೆಫ್ ಎಂ.ಎ. ,ಸತೀಶ್ ಕುಲಾಲ್, ಗುರುಮೂರ್ತಿ, ಆಶೀಕ್. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್,ಹಾಗೂ ಹಲವಾರು ನಾಯಕರು, ಉಪಸ್ಥಿತರಿದ್ದರು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು, ಊರಿನ ಕೊಡುಗೈ ಧಾನಿಗಳಿಂದ ಶಾಲಾ ರಸ್ತೆ ಗೆ ಇಂಟರ್ಲಾಕ್, ಕೈ ತೊಳೆಯುವ ಬೇಸಿನ್ ಉದ್ಘಾಟನೆ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಧರ್ ಗೌಡ ಸ್ವಾಗತಿಸಿ ವಂದಿಸಿದರು.
- Friday
- November 1st, 2024