
ದೇವಚಳ್ಳ ಗ್ರಾಮದ ಸೇವಾಜೆ – ಮಂಜೊಳುಕಜೆ ಸಾರ್ವಜನಿಕ ರಸ್ತೆಯ ಕಾಂಕ್ರೀಟಿಕರಣ ಉದ್ಘಾಟನಾ ಕಾರ್ಯಕ್ರಮವು ಮಾ.23 ರಂದು ನಡೆಯಿತು.
ಉದ್ಘಾಟನೆ ಯನ್ನು ರಾಘವಗೌಡ ಮೆತ್ತಡ್ಕ ದೀಪ ಬೆಳಗಿಸುವ ಮೂಲಕ, ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾವತಿ ಸೇವಾಜೆ ರಿಬ್ಬನ್ ತುಂಡರಿಸುವ ಮೂಲಕ ರಸ್ತೆಗೆ ಚಾಲನೆ ನೀಡಿದರು. ಹಾಗೂ ಪರಮೇಶ್ವರ ನಂದಗೋಕುಲ ತೆಂಗಿನಕಾಯಿ ಒಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಗಳಾದ ಶೈಲೇಶ್ ಅಂಬೆಕಲ್ಲು, ದುರ್ಗಾದಾಸ್ ಮೆತ್ತಡ್ಕ ಹಾಗೂ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ವಿಶ್ವನಾಥ ನಂದಗೋಕುಲ ವಂದಿಸಿದರು.