Ad Widget

ಮಡಂತ್ಯಾರು : ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 17ನೇ ಶಾಖೆ ಉದ್ಘಾಟನೆ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಇಂದು ಉದ್ಘಾಟನೆಗೊಂಡಿತು. ಶಾಸಕ ಹರೀಶ್ ಪೂಂಜರವರು ನೂತನ  ಶಾಖೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಥಮ ಠೇವಣಿ ಪತ್ರವನ್ನು ಮಡಂತ್ಯಾರು ಸಿ.ಎ ಬ್ಯಾಂಕ್‌  ಅಧ್ಯಕ್ಷ ಕೆ.ಅರವಿಂದ್ ಜೈನ್ , ಪ್ರಥಮ ಪಾಲು ಪತ್ರ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್   ಧರ್ಮಸ್ಥಳ ಇದರ ಪ್ರಾದೇಶಿಕ ನಿರ್ದೇಶಕ ವಿವೇಕ್’ ವಿನ್ಸೆಂಟ್ ಪಾಯಸ್, ಪ್ರಥಮ ಸಾಲ ಪತ್ರದ ಮಂಜೂರಾತಿಯನ್ನು ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕಿ(ಪ್ರಭಾರ)  ಶ್ರೀಮತಿ ಸುಕನ್ಯ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಶಶಿಪ್ರಭ ವಿತರಿಸಿದರು.‌ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಚ್ಚಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದುಗ್ಗಪ್ಪ ಗೌಡ ಪೊಸಂದೋಡಿ, ಜೆ.ಎಂಜೆ ಕಾಂಪ್ಲೆಕ್ಸ್ ಕಟ್ಟಡದ ಮಾಲಕ ಜಾನ್ ಕ್ರಾಸ್ತಾ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರುಗಳಾದ  ಪಿ.ಎಸ್ ಗಂಗಾಧರ, ದಿನೇಶ್‌ ಮಡಪ್ಪಾಡಿ , ನಿರ್ದೇಶಕರಾದ ಲತಾ ಮಾವಜಿ, ನಿತ್ಯಾನಂದ ಮುಂಡೋಡಿ, ನವೀನ್ ಕುಮಾರ್ ಜಾಕೆ, ಹೇಮಚಂದ್ರ ಐ ಕೆ, ದಾಮೋದರ ಎನ್ ಎಸ್, ನಾರಾಯಣ ಗೌಡ ಕೆ.ಸಿ, ಸದಾನಂದ ಕೆ.ಸಿ, ಉಪಸ್ಥಿತರಿದ್ದರು.

. . . . . . . . .

ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ, ಸದಾನಂದ ಜಾಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading