Ad Widget

ಪೆರಾಜೆ : ಜ್ಯೋತಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ಮಾ.19 ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾಸಂಘ ಪೆರಾಜೆಯ
ಡಾ| ಎನ್.ಎ. ಜ್ಞಾನೇಶ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯದ ಇತಿಹಾಸ ಉಪನ್ಯಾಸಕ ಪ್ರಸನ್ನ ನಿಡ್ಯಮಲೆ, ಕೊಡಗು ವೈದ್ಯಕೀಯ ಮಹಾವಿದ್ಯಾಲಯದ
ಮಕ್ಕಳ ತಜ್ಞರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ| ಕುಶ್ವಂತ್ ಕೋಳಿಬೈಲು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಂಚಾಲಕ ಹರಿಶ್ಚಂದ್ರ ಮುಡ್ಕಜೆ, ಅಧ್ಯಕ್ಷ ಉದಯಚಂದ್ರ ಕುಂಬಳಚೇರಿ, ಮುಖ್ಯೋಪಾಧ್ಯಾಯ ವೇಣುಗೋಪಾಲ.ಎ, ವಿಧಾಕುಮಾರಿ ಬಂಗಾರಕೋಡಿ ಮತ್ತು ಸಿ.ಆರ್.ಪಿ ರೇಖಾ ಅಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕ ಚರಣ್ ರಾಜ್ ನಡೆಸಿಕೊಟ್ಟರು. ಶಿಕ್ಷಕ ನಾಗರಾಜ್ ವಂದಿಸಿ, ಶಿಕ್ಷಕಿ ಚಂದ್ರಮತಿ ನಿರೂಪಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!