ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ವಸತಿ ಮಹಾ ಮಂಡಳ ನಿಯಮಿತ ಬೆಂಗಳೂರು ಮತ್ತು ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ .ಮಾ.20 ರಂದು ಬೆಂಗಳೂರಿನ ಕೆಂಗೇರಿ ಗಣೇಶ್ ಮೈದಾನದಲ್ಲಿ
ಜರುಗಿದ ‘ಸಹಕಾರ ರತ್ನ ‘ ಪ್ರಶಸ್ತಿ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೇಂದ್ರ ಸರಕಾರದ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ನೀಡುವ ಎನ್ .ಸಿ.ಡಿ.ಸಿ ರೀಜಿನಲ್ ಅವಾರ್ಡ್ಸ್ 2021- (ರಾಷ್ಟ್ರ ಪ್ರಶಸ್ತಿ) ಪ್ರಶಸ್ತಿ ಪ್ರದಾನ ಜರುಗಿತು. ಕಾರ್ಯಕ್ರಮವನ್ನು ಮುಖ್ಯ ಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಉದ್ಘಾಟಿಸಿದರು.
ಸಮಾರಂಭದಲ್ಲಿ ರಾಜ್ಯ ಸಹಕಾರ ಸಚಿವರ ಎಸ್. ಟಿ ಸೋಮಶೇಖರ್
ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ,ರಾಜ್ಯ ಸಹಕಾರ ಮಂಡಳ ಅಧ್ಯಕ್ಷ ಜಿ.ಟಿ .ದೇವೇಗೌಡ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ , ಉಪಾಧ್ಯಕ್ಷ ಲಿಗೋಧರ ಆಚಾರ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ, ನಿರ್ದೇಶಕರಾದ ಚಿನ್ನಪ್ಪ ಚೊಟ್ಟೆಮಜಲು,ವಾಚಣ್ಣ ಕೆರೆಮೂಲೆ, ಗಣೇಶ್ ಪೈ,ಮುದರ , ಸಂಘದ ಉಪಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎಣ್ಣೆಮಜಲು, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನಲ್ಲಿ ಜನ ಔಷಧಿ ಕೇಂದ್ರ ತೆರೆದ ಪ್ರಥಮ ಸಂಘ, ಅತೀ ಹೆಚ್ಚು ಬೆಳೆ ವಿಮೆ ಸಂಗ್ರಹಿಸಿದ ಸಂಘ, ಪರಿಶಿಷ್ಟ ಜಾತಿ ,ಪಂಗಡ ಅತೀ ಹೆಚ್ಚು ಸಾಲ ಸೌಲಭ್ಯ ನೀಡಿದ ಸಂಘ , ಸಾಲಗಾರ ಸದಸ್ಯರಿಗೆ ವಿಮಾ ಸೌಲಭ್ಯ, ಇ ಸ್ಟ್ಯಾಂಪ್ ಸೌಲಭ್ಯ, ನೆಫ್ಟ್ , ಆರ್. ಟಿ ಜಿ.ಎಸ್ ಸೌಲಭ್ಯಗಳು ಮೊದಲಾದ ಸಂಘದ ಸಾಧನೆ- ಪ್ರಗತಿ ಗುರುತಿಸಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೇಂದ್ರ ಸರಕಾರದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ವಿಭಾಗೀಯ ದ್ವಿತೀಯ ರಾಷ್ಟ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.2018 ರಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಥಮ ಪ್ರಶಸ್ತಿ ನೀಡಿ ಗೌರವಿಸಿತು.