ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ಮೆಟ್ಟಿನಡ್ಕ ಒಕ್ಕೂಟದ ದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ 2 ದಿನಗಳ ಸೃಜನಶೀಲ ತರಬೇತಿ ಕಾರ್ಯಕ್ರಮದಡಿಯಲ್ಲಿ ಮ್ಯಾಟ್ ತಯಾರಿಕೆ ಕಾರ್ಯಕ್ರಮ ಮಾ.20 ರಂದು ವೆಂಕಟೇಶ್ವರ ಸಭಾಭವನ ಹಾಲೆಮಜಲಿನಲ್ಲಿ ಆರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಯಂತಿ ಅವರು ನೆರವೇರಿಸಿದರು . ಕಾರ್ಯಕ್ರಮದಲ್ಲಿ ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಮುರಳೀಧರರವರು ಸೃಜನಶೀಲ ತರಬೇತಿ ಕಾರ್ಯಕ್ರಮದ ಉದ್ದೇಶ ಹಾಗೂ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಗುತ್ತಿಗಾರು ಸದಸ್ಯರಾದ ಶ್ರೀಮತಿ ಭಾರತಿ ಶ್ರೀಮತಿ ಅನಿತಾ ನಾಯಕ್,ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮನೋರಮ ಕಡಪಲ ಹಾಗೂ ತರಬೇತು ಸಹಾಯಕರಾದ ಡಿ.ಜೆ. ಜನಾರ್ದನ್ ,ಹಾಗೂ ಕೇಂದ್ರದ ಸಂಯೋಜಕಿ ಚಂದ್ರವತಿ ರವರು,ಒಕ್ಕೂಟದ ಉಪಾಧ್ಯಕ್ಷ ರವೀಂದ್ರ ಪೂಜಾರಿಕೋಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗುತ್ತಿಗಾರು ಸೇವಾಪ್ರತಿನಿಧಿ ಲೋಕೇಶ್ವರ ಡಿ.ಆರ್. ನಿರೂಪಿಸಿ ,ಶ್ರೀಮತಿ ರತಿ ಸ್ವಾಗತಿಸಿ ಶ್ರೀಮತಿ ಮಾಲತಿ ವಂದಿಸಿದರು.
- Thursday
- November 21st, 2024