
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ಹಾಗೂ ತರುಣ ಘಟಕದ ಆಶ್ರಯದಲ್ಲಿ ಎಂ.ಜಿ.ಎಂ ಮೈದಾನದಲ್ಲಿ ಗೌಡ ಕಪ್ ಕ್ರೀಡಾಕೂಟ ನಡೆಯಿತು. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಗೌಡ ಯುವ ಘಟಕದ ಅಧ್ಯಕ್ಷ ಅಕ್ಷಯ್.ಕೆ.ಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು, ಯುವ ಘಟಕ ಯಾನೆ ಒಕ್ಕಲಿಗ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು, ಪುತ್ತೂರು ಯುವ ಒಕ್ಕಲಿಗರ ಗೌಡರ ಅಧ್ಯಕ್ಷ ನಾಗೇಶ್ ಕೆ ಕೆಡಂಜಿ, ಜಗದೀಶ್ ಸರಳಿಕುಂಜ, ನವೀನ್ ಕಾಮಧೇನು, ಮಯೂರ್ ಕದಿಕಡ್ಕ, ಕ್ರೀಡಾ ಸಂಚಾಲಕ ದೊಡ್ಡಣ್ಣ ಬರೆಮೇಲು ಉಪಸ್ಥಿತರಿದ್ದರು. ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಹಾಗು ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಗೀತಾ ಕಂದಡ್ಕ ಮತ್ತು ಸಿ.ಇ.ಎನ್ ಮಂಗಳೂರು ಪೋಲೀಸ್ ನಿರೀಕ್ಷಕ ಸತೀಶ್ ಮಜಿಕೋಡಿಯವರನ್ನು ಸನ್ಮಾನಿಸಲಾಯಿತು.
ರಾಹುಲ್ ಎ ಆರ್ ಪ್ರಾರ್ಥಿಸಿ, ರಜತ್ ಗೌಡ ಸ್ವಾಗತಿಸಿ, ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.