Ad Widget

ಖ್ಯಾತ ವಾಸ್ತು ತಜ್ಞ ಮಹೇಶ್ ಮುನಿಯಂಗಳರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಸುಬ್ರಹ್ಮಣ್ಯದ ಖ್ಯಾತ ವಾಸ್ತು ತಜ್ಞ, ಸಾವಿರಾರು ದೇವಸ್ಥಾನಗಳ ವಾಸ್ತು ಶಿಲ್ಪಿ ಮಹೇಶ ಮುನಿಯಂಗಳ ಅವರಿಗೆ ಮಾ.19 ರಂದು ತಮಿಳುನಾಡಿನ ಹೊಸೋರು ನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಚೆನ್ನೈನ ಏಶಿಯನ್ ವೇದಿಕ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಕೊಡಮಾಡಿದೆ. ಮಹೇಶ್ ಮುನಿಯಂಗಳ ಅವರು ಬಿಳಿನೆಲೆ ಗ್ರಾಮದ ಕೈಕಂಬದ ಗೋಪಾಲಿಯವರು. ಮೂಲತಹ ಕಾಸರಗೋಡು ಕಾನತ್ತೂರಿನ ಮುನಿಯಂಗಳದವರು.

. . . . . . .


ಇವರು ಪ್ರಸಿದ್ದ ದೇವಸ್ಥಾನಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಆಸುಪಾಸಿನ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಕೊಲ್ಲೂರು ದೇವಸ್ಥಾನ, ಜೀರ್ಣೋದ್ಧಾರ ಗೊಳ್ಳುತ್ತಿರು ಕುಂಬಾಶಿ ಚಂಡಿಕಾ ಪರಮೇಶ್ವರಿ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ರಾಮಚಂದ್ರಾಪುರ ಮಠ, ಸುಬ್ರಹ್ಮಣ್ಯದ ಮಠದ ವಾಸ್ತುಶಿಲ್ಪಿ. ಸುಳ್ಯ ತಾಲ್ಲೂಕಿನ ಹಲವು ದೇವಸ್ಥಾನಗಳ ವಾಸ್ತು ತಜ್ಞರಾಗಿದ್ದಾರೆ. ಸುಬ್ರಹ್ಮಣ್ಯದ ವನದುರ್ಗಾ ದೇವಿ ದೇವಸ್ಥಾನ, ಸೋಮನಾಥೇಶ್ವರ ದೇವಸ್ಥಾನ, ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಪೆರುವಾಜೆ ಜಲದುರ್ಗಾ ದೇವಸ್ಥಾನ, ಚೆನ್ನಕೇಶವ ದೇವಸ್ಥಾನ ಸುಳ್ಯ, ಚೊಕ್ಕಾಡಿಯ ಶ್ರೀರಾಮ ದೇವಸ್ಥಾನ ಹೀಗೆ ಹತ್ತು ಹಲವು ದೇವಸ್ಥಾನಗಳ ವಾಸ್ತು ಹೇಳುವವರು. ಎಂ. ಸುಬ್ರಹ್ಮಣ್ಯ ಮುನಿಯಂಗಳ ಮತ್ತು ಸರಸ್ವತಿ ದಂಪತಿಗಳ ಪುತ್ರ. ಪತ್ನಿ ವಿದ್ಯಾಲಕ್ಷ್ಮೀ, ಮಗಳು ಮನಸಾದೇವಿ ಮತ್ತು ಮಗ ಕಾರ್ತಿಕೇಯ ಕುಮಾರಸ್ವಾಮಿ ವಿದ್ಯಾಲಯದ ಸುಬ್ರಹ್ಮಣ್ಯದ ವಿದ್ಯಾರ್ಥಿಗಳು. ಪ್ರಶಸ್ತಿ ಪ್ರದಾನ ಸಂದರ್ಭ ಮಣಿಕಂಠ ಸುಬ್ರಹ್ಮಣ್ಯ, ಸೃಜನ್, ಬಾನುಪ್ರಕಾಶ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!